ಆದಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ

ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಭಾನುವಾರ ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀ ರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಭಾನುವಾರ ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Published on
ಶ್ರೀರಂಗಪಟ್ಟಣ : ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ರಥಸಪ್ತಮಿಯ ಪ್ರಯುಕ್ತ ಕ್ಷೇತ್ರಪಾಲಕ ಶ್ರೀ ಆದಿರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರರಾರು ಆಸ್ತಿಕ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಲ್ಲಿ ಭಾನುವಾರ ವರ್ಣರಂಜಿತವಾಗಿ ಅಲಂಕೃತಗೊಂಡಿದ್ದ ಭವ್ಯರಥಕ್ಕೆ ಶ್ರೀದೇವಿ, ಭೂದೇವಿ, ಶ್ರೀ ರಂಗನಾಯಕಿ ಅಮ್ಮನವರ ಸಮೇತ ಶ್ರೀ ರಂಗನಾಥಸ್ವಾಮಿಯ ಪಂಚಲೋಹದ ವಿಶೇಷ ಉತ್ಸವ ನೆರವೇರಿತು.
ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ದೇಗುಲದಿಂದ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳು ಒಳಗೊಂಡಂತೆ ಸಿಬ್ಬಂದಿ ಹೆಗಲಮೇಲೆ ಹೊತ್ತು ತಂದು ಪ್ರತಿಷ್ಠಾಪಿಸಿದರು.
ವೈದಿಕರು ವಿಷ್ಣು ಸಹಸ್ರನಾಮ ಪಠಿಸಿದರು. ಬಳಿಕ ಆಗಸದಲ್ಲಿ 3 ಸುತ್ತು ಗರುಡನ ಪ್ರದಕ್ಷಿಣೆಯಾಗುತ್ತಿದಂತೆ ರಂಗನಾಥಸ್ವಾಮಿ ದೇವಾಲಯದ ಇಒ ಉಮಾ ಹಾಗೂ ಆಗಮಿಕ ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ಸನ್ನಿಧಿ ಅರ್ಚಕ ಪ್ರಸನ್ನ ಅವರ ನೇತೃತ್ವದಲ್ಲಿ
ಡಾ.ಭಾನುಪ್ರಕಾಶ್ ಶರ್ಮ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮತ್ತು ತಹಸೀಲ್ದಾರ್ ಚೇತನಾ ಯಾದವ್ ಸಾಕ್ಷಿಯಾದರು.
ವಿಶೇಷ ಪೂಜೆ :
ರಥಸಪ್ತಮಿಯ ದಿನವಾದ ಭಾನುವಾರ ಮುಂಜಾನೆ 4ಕ್ಕೆ ಆದಿರಂಗನಾಥ ಸ್ವಾಮಿಗೆ ಪ್ರಧಾನ ಅರ್ಚಕ ವಿಜಯಸಾರಥಿ ಹಾಗೂ ಪ್ರಸನ್ನ ಅವರ ನೇತೃತ್ವದಲ್ಲಿ ಸುಪ್ರಭಾತ ಸೇವೆ ನೆರವೇರಿತು.
ನಿತ್ಯ ಸೇವೆ, ತಿರುಪಾವೈ, ಜತೆಗೆ ಸುಗಂಧ ದ್ರವ್ಯಗಳ ಹೋಮ, ಬಲಿಪ್ರದಾನ ಅರ್ಪಣೆ ಬಳಿಕ ಶಾತಮೊರೈ ಪೂಜೆ ಸಲ್ಲಿಸಲಾಯಿತು. ಬಳಿಕ ಬೆಳಗ್ಗೆ 7 ಗಂಟೆಗೆ ಸೂರ್ಯ ಮಂಡಲ ಹಾಗೂ ಶೇಷ ಗಜಲಕ್ಷ್ಮೀ ರಥಗಳಿಗೆ ವಿಶೇಷ ಪೂಜೆ ಅರ್ಪಿಸಲಾಯಿತು.
ಚತುರ್ಥ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಅವಳಿ ರಥಗಳಿಗೆ ಪುರಜನರು ದಾರಿಯುದ್ದಕ್ಕೂ ಕರ್ಪೂರದ ಜ್ಯೋತಿ ಬೆಳಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net