ಧನುರ್ಮಾಸ ಪ್ರಯುಕ್ತ ಶ್ರೀ ಸೀತಾರಾಮ, ಲಕ್ಷ್ಮಣ, ಹನುಮ ದೇವರಿಗೆ ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಸಂಪ್ರದಾಯದಂತೆ ಪೂಜೆಗಳೊಂದಿಗೆ ಭಜನೆಯನ್ನು ಅರ್ಪಿಸಿದರು. ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಪಂಚಲೋಹದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಿಗೆ ಪ್ರಸಾದ ವಿನಿಯೋಗಿಸಿದರು.