ಸಭೆಯಲ್ಲಿ ಮಹಾಸಭಾ(ಜೆಎಲ್‌ಬಿ)ದ ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಮಾತನಾಡಿದರು. ಎಂ.ಬಸವರಾಜು, ಎಚ್.ಕೆ.ಕೆಂಪಣ್ಣ, ಶಿವಲಿಂಗಪ್ಪ, ಎಚ್.ಎಸ್.ಮಹದೇವಸ್ವಾಮಿ, ವಿಜಯ ಮಹಾಲಿಂಗಪ್ಪ, ಮಹಾದೇವಸ್ವಾಮಿ, ಕೆಂಪರಾಜು ಇದ್ದರು.
ಮದ್ದೂರು: ಸಾಂಸ್ಕೃತಿಕ ನಾಯಕ ಜಗಜ್ಯೋತಿ ವಿಶ್ವಗುರು ಶ್ರೀ ಬಸವೇಶ್ವರ ಜಯಂತ್ಯುತ್ಸವ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಉದ್ಘಾಟನೆ ಕಾರ್ಯಕ್ರಮ ನಗರದ ಹಳೇ ಎಂಸಿ ರಸ್ತೆಯಲ್ಲಿರುವ ಶ್ರೀ ರಾಮಮಂದಿರ ಪಾರ್ಕ್ ಸರ್ಕಲ್‌ನಲ್ಲಿ ಮೇ 17ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ(ಜೆಎಲ್‌ಬಿ) ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ತಿಳಿಸಿದರು.
ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನಗಳ ಮೂಲಕ ಸಮಾಜದಲ್ಲಿದ್ದ ಅಂಕುಡೊಂಕು ತಿದ್ದಲು ಶ್ರಮಿಸಿದ ಮಹಾನ್ ಮಾನವತಾವಾದಿ ಬಸವಣ್ಣ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಬೇವೂರು ಶ್ರೀ ಮಲ್ಲಿಕಾರ್ಜುನಸ್ವಾಮಿ ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಪಾಂಡವಪುರ ಬೇಬಿಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ ವಹಿಸುವರು. ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮದ ಉದ್ಘಾಟನೆ ಮಾಡುವರು,
ಜಾಗತಿಕ ಲಿಂಗಾಯತ ಮಹಾಸಭಾ (ಜೆಎಲ್‌ಬಿ) ತಾಲೂಕು ಘಟಕದ ಅಧ್ಯಕ್ಷ ಶಿವಾನಂದ ಅಧ್ಯಕ್ಷತೆ ವಹಿಸುವರು. ಬಸವಣ್ಣನವರ ಭಾವಚಿತ್ರಕ್ಕೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಪುಷ್ಪಾರ್ಚನೆ ಮಾಡುವವರು. ಬಸವ ನುಡಿಯನ್ನು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ವಚನ ಕುಮಾರಸ್ವಾಮಿ ನುಡಿವರು. ಮುಖ್ಯ ಅತಿಥಿಗಳಾಗಿ ಆರಕ್ಷಕ ನಿರೀಕ್ಷಕ ಎಚ್.ಎಸ್.ನವೀನ್, ಶರಣ ಸಾಹಿತ್ಯ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಶರಣೆ ಅಕ್ಕ ಮಹಾದೇವಿ ಪ್ರಶಸ್ತಿ ಪ್ರದಾನವನ್ನು ಶರಣು ವಿಶ್ವವಚನ ಫೌಂಡೇಷನ್‌ನ ಶರಣೆ ರೂಪಾ ಕುಮಾರಸ್ವಾಮಿ ಮಾಡಲಿದಾರೆ. ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಸಭೆಯಲ್ಲಿ ಜೆಎಲ್‌ಬಿ ಮದ್ದೂರು ತಾಲೂಕು ಘಟಕದ ಹಿರಿಯ ಉಪಾಧ್ಯಕ್ಷರಾದ ಎಂ.ಬಸವರಾಜು, ಹುಲಿಕೆರೆ ಎಚ್.ಕೆ.ಕೆಂಪಣ್ಣ, ಮೆಣಸಗೆರೆ ಶಿವಲಿಂಗಪ್ಪ, ಉಪಾಧ್ಯಕ್ಷರಾದ ಎಚ್.ಎಸ್.ಮಹದೇವಸ್ವಾಮಿ, ವಿಜಯ ಮಹಾಲಿಂಗಪ್ಪ, ಮಹಾದೇವಸ್ವಾಮಿ, ಕೆಂಪರಾಜು, ಮೇಘ ಎಲೆಕ್ಟ್ರಿಕಲ್ಸ್ ಮಾಲೀಕ ಮೇಘನಾಂದ ಸೇರಿದಂತೆ ಇತರರು ಇದ್ದರು.