ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ

ಪಾಂಡವಪುರದ ಮಹಾಂಕಾಳೇಶ್ವರಿ ಬಡಾವಣೆಯ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನ ಪಕ್ಕದ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪಸ್ವಾಮಿಗೆ ತುಪ್ಪದ ಅಭಿಷೇಕ ನೆರವೇರಿಸಲಾಯಿತು.
ಪಾಂಡವಪುರದ ಮಹಾಂಕಾಳೇಶ್ವರಿ ಬಡಾವಣೆಯ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನ ಪಕ್ಕದ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಅಯ್ಯಪ್ಪಸ್ವಾಮಿಗೆ ತುಪ್ಪದ ಅಭಿಷೇಕ ನೆರವೇರಿಸಲಾಯಿತು.
Published on
ಪಾಂಡವಪುರ: ಶಬರಿಮಲೆಯ ಅಯ್ಯಪ್ಪಸ್ವಾಮಿ ಬೆಟ್ಟದಲ್ಲಿ ಮಕರಜ್ಯೋತಿ ಕಾಣುವ ಹಿನ್ನೆಲೆಯಲ್ಲಿ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಬುಧವಾರ ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ತುಪ್ಪದ ಅಭಿಷೇಕ ನೆರವೇರಿಸಲಾಯಿತು.
ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆಯ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನ ಪಕ್ಕದ ಅಯ್ಯಪ್ಪನ ಸನ್ನಿಧಿಯನ್ನು ಹೂವು, ವಿದ್ಯುತ್ ದೀಪ, ತಳಿರು ತೋರಣಗಳಿಂದ ಅಲಂಕರಿಸಿ ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ತುಪ್ಪದ ಅಭಿಷೇಕ ನೆರವೇರಿಸಲಾಯಿತು. ವಿಶೇಷವೆಂದರೆ ಭಕ್ತಾದಿಗಳಿಗೆ ಕೈಯಾರ ತುಪ್ಪದ ಅಭಿಷೇಕ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು.
ಭಕ್ತಾಧಿಗಳು ತುಪ್ಪ ತಂದು ಅಯ್ಯಪ್ಪನಿಗೆ ಅಭೀಷೇಕ ಮಾಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು. ಸಂಜೆ ಭಜನೆಯೊಂದಿಗೆ ಅಯ್ಯಪ್ಪ ಪಡಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಈ ವೇಳೆ ಅಯ್ಯಪ್ಪ ಭಕ್ತಮಂಡಳಿಯ ಎಸ್.ಸುಬ್ರಹ್ಮಣ್ಯ, ಎಂ.ರಾಜು, ಮಂಜುನಾಥ, ಪ್ರಸನ್ನ, ಎಸ್.ರಾಜು, ಕಾಟು, ಶ್ರೀಧರ ಇತರರು ಪೂಜೆ ನೇತೃತ್ವ ವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net