ಮಠಗಳಿಂದ ದೂರಾಗುತ್ತಿರುವ ಸಮಾಜ

ಶ್ರೀರಂಗಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ಶ್ರೀಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯ 51ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ನಾಡಿನ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ಜ್ಯೋತಿ ಬೆಳಗಿ ಚಾಲನೆ ನೀಡಲಾಯಿತು.
ಶ್ರೀರಂಗಪಟ್ಟಣದ ಹೊರವಲಯದ ಪಶ್ಚಿಮವಾಹಿನಿಯ ಚಂದ್ರವನ ಆಶ್ರಮದಲ್ಲಿ ಸೋಮವಾರ ಶ್ರೀಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯ 51ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ನಾಡಿನ ವಿವಿಧ ಮಠಗಳ ಮಠಾಧೀಶರ ಸಮ್ಮುಖದಲ್ಲಿ ಜ್ಯೋತಿ ಬೆಳಗಿ ಚಾಲನೆ ನೀಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಅಭಿಮತ
  • ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ 51ನೇ ವರ್ಧಂತ್ಯುತ್ಸವ

ಶ್ರೀರಂಗಪಟ್ಟಣ:

ಸಮಾಜ ಹಾಗೂ ಸಾರ್ವಜನಿಕರಲ್ಲೂ ಆರೋಗ್ಯಯುತ ವಾತಾವರಣ ಸೃಷ್ಟಿಸುವಲ್ಲಿ ಕಾವೇರಿ ತೀರದ ಹಠಯೋಗಿ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಯವರ ಪಾತ್ರ ಶ್ಲಾಘನೀಯ ಎಂದು ತುಮಕೂರು ಜಿಲ್ಲೆಯ ನೊಣವಿನಕೆರೆಯ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಬಣ್ಣಿಸಿದರು.

ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಸೋಮವಾರ ಶ್ರೀಮಠದ ಪೀಠಾಧಿಪತಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅವರ 51ನೇ ವರ್ಧಂತ್ಯುತ್ಸವದಲ್ಲಿ ಮಾತನಾಡಿದರು.
ಮಠಮಾನ್ಯರ ಮಾತು ಕೇಳುತ್ತಿದ್ದ ನಮ್ಮ ಸಮಾಜ ಈಗ ಆಧುನಿಕ ತಂತ್ರಜ್ಞಾನ ಹಾಗೂ ಆವಿಷ್ಕಾರದ ಹೆಸರಲ್ಲಿ ಬದಲಾಗಿ ಮಠಗಳಿಂದ, ಮಠಾಧೀಶರ ಮಾತುಗಳಿಂದ ದೂರ ಉಳಿಯುತ್ತಿದೆ. ಇಂತಹ ಸಂದರ್ಭದಲ್ಲೂ ಶ್ರೀಮಠ ದೈವಿಕ ಧಾರ್ಮಿಕ ಕಾರ್ಯಗಳೊಂದಿಗೆ ಲೋಕಕಲ್ಯಾಣರ್ಥ ಸಾಮಾಜಿಕ ಕಾಳಜಿಯಿಂದ ಸಹಾಯ, ಸಹಕಾರ, ಯೋಗ, ಆರೋಗ್ಯದಂತಹ ಶಿಬಿರ, ಧ್ಯಾನ, ಚಿಕಿತ್ಸೆ ಇಂತಹ ಸಾಕಷ್ಟು ಕಾರ್ಯಕ್ರಮ ರೂಪಿಸಿ ಆಯೋಜಿಸಿ ಯಶಸ್ವಿಗೊಳಿಸುವ ಜತೆಗೆ ನೊಂದ ತಾಯಂದಿರ ಬೆನ್ನಿಗೆ ನಿಂತು ಸಾಂತ್ವನ ಮತ್ತು ಸ್ಥೈರ್ಯದೊಂದಿಗೆ ಮಡಿಲು ತುಂಬಿ ತವರು ಮಠವಾಗಿ ಗುರುತಿಸಿಕೊಂಡು ಪ್ರೀತಿ ಮತ್ತು ನಂಬಿಕೆ ಗಳಿಸಿದೆ. ಇಂತಹ ತ್ರಿನೇತ್ರ ಶ್ರೀಗಳ ಕೈಂಕರ್ಯಗಳ ಶ್ರೀರಕ್ಷೆ ಮತ್ತಷ್ಟು ಮಗದಷ್ಟು ಭಕ್ತಸಮೂಹಕ್ಕೆ ಲಭಿಸಲಿ ಎಂದು ಹೇಳಿದರು.
ಶ್ರೀಮಠದ ಪೀಠಾಧಿಪತಿ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನನ್ನ ಜನುಮ ದಿನದ ಸುಸಂದರ್ಭದಲ್ಲಿ ನಾಡಿನ 52 ಮಠಗಳ ಮಠಾಧೀಶರ ಮಹಾಸಂಗಮವಾಗಿದ್ದು, ಇವರೊಂದಿಗೆ ಸಹಸ್ರರಾರು ಭಕ್ತ ಗಣದ ಹಾರೈಕೆ ನನ್ನಲ್ಲಿ ನವನೀತ ಶ್ರೀರಕ್ಷೆ ನೀಡಿದಂತಾಗಿದೆ. ಲೋಕವು ನಮ್ಮೊಂದಿಗೆ ಇದ್ದಾಗ ಲೋಕಕಲ್ಯಾಣ ಸುಗಮ ಹಾಗೂ ಮಹಾಸಂಗಮ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀಗಳ 51ನೇ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ಪಶ್ಚಿಮವಾಹಿನಿಯ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀಮಠದ ವತಿಯಿಂದ ನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಹುಕ್ಕೇರಿಯ ಹಿರೇಮಠದ ಗುರುಶಾಂತೇಶ್ವರ ಸಂಸ್ಥಾನದ ಶ್ರೀ ಚಂದ್ರಶೇಖರ ಶಿವಾಚಾರ್ಯ, ಹೊಸದುರ್ಗದ ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮನಾಂದಪುರಿ ಸ್ವಾಮೀಜಿ, ತುಮಕೂರಿನ ಎಲೆರಾಂಪುರದ ಕುಂಚಿಟಿಗರ ಪೀಠದ ಹನುಮಂತನಾಥ ಸ್ವಾಮೀಜಿ, ಮದ್ಗಾರಲಿಂಗಯ್ಯನ ಹುಂಡಿಯ ಗೌರಿಶಂಕರ ಸ್ವಾಮೀಜಿ, ಕಾರದ ಮಠದ ಬೆಳ್ಳಾವಿಯ ಕಾರದ ವೀರಬಸವ ಸ್ವಾಮೀಜಿ, ತುಮಕೂರಿನ ದೊಡ್ಡಗುಣಿಯ ರೇವಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಸಿದ್ದಲಿಂಗ ಸ್ವಾಮೀಜಿ, ಬೀದರ್‌ನ ಸಾಯಿಗಾಂವ್ ಶಿವಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ರಾಜಕಾರಣಿ ನೆ.ಲ.ನರೇಂದ್ರಬಾಬು, ಶ್ರೀಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net