ಕಿರುಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಕಾಲುವೆ ಅಭಿವೃದ್ಧಿ ಕಾಮಗಾರಿ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ಮಾಡಿದರು. ವಿಜೇಂದ್ರ, ಸುಧಾಕರ್, ಧನಂಜಯ, ಅಡ್ಡ ರಸ್ತೆ ಗೋಪಿ, ಚಿಕ್ಕತಿಮ್ಮೇಗೌಡ, ಶರತ್, ಶೋಭಾ, ಮುರಳಿ, ಬಾಬು, ರವಿ, ಪ್ರಸನ್ನ, ಚಿಕ್ಕೇಗೌಡ ಇದ್ದರು.
ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಕಾಲುವೆ ಅಭಿವೃದ್ಧಿ ಕಾಮಗಾರಿ ಶಾಸಕ ಕೆ.ಎಂ.ಉದಯ್ ಭೂಮಿ ಪೂಜೆ ಮಾಡಿದರು. ವಿಜೇಂದ್ರ, ಸುಧಾಕರ್, ಧನಂಜಯ, ಅಡ್ಡ ರಸ್ತೆ ಗೋಪಿ, ಚಿಕ್ಕತಿಮ್ಮೇಗೌಡ, ಶರತ್, ಶೋಭಾ, ಮುರಳಿ, ಬಾಬು, ರವಿ, ಪ್ರಸನ್ನ, ಚಿಕ್ಕೇಗೌಡ ಇದ್ದರು.
Published on
ಮದ್ದೂರು: ಸರ್ಕಾರ ಈಗಾಗಲೇ ತಾಲೂಕಿನ ಸಮಗ್ರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಅನುದಾನ ನೀಡಿದ್ದು, ಇನ್ನೂ 1 ಸಾವಿರ ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಕಾವೇರಿ ನೀರಾವರಿ ನಿಗಮದದಿಂದ 5 ಕೋಟಿ ರೂ.ವೆಚ್ಚದಲ್ಲಿ ಕೆರಗೋಡು ಶಾಖಾ ನಾಲೆಯ 24ನೇ ವಿತರಣಾ ನಾಲೆಯ 4ನೇ ಮೈನರ್ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರದಿಂದ ಸುಮಾರು 2 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದು ರಸ್ತೆ, ಚರಂಡಿ, ಕಾಲುವೆ, ನಾಲೆಗಳು, ಕೆರೆಗಳು ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ರೈತಾಪಿ ವರ್ಗದರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದೇನೆ ಎಂದರು.
ಉಳಿದ 2 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡುವ ಮೂಲಕ ಪ್ರತಿಯೊಂದು ಗ್ರಾಮಕ್ಕೂ ರಸ್ತೆ, ಚರಂಡಿ, ಕುಡಿಯುವ ನೀರು, ಕಾಲುವೆ, ನಾಲೆಗಳು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಿದ್ದೇನೆ ಎಂದರು.
ಬೆಸಗರಹಳ್ಳಿ ಜಿಪಂ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಕಾಲುವೆಗಳು ಆಧುನೀಕರಣಗೊಳ್ಳದ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹೋಗುತ್ತಿರಲಿಲ್ಲ. ಈಗ ಕೋಟ್ಯಂತರ ರೂ.ವೆಚ್ಚದಲ್ಲಿ ಕಾಲುವೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ವ್ಯವಸಾಯ ಮಾಡಲು ನೀರಿಗೆ ತೊಂದರೆಯಾಗುವುದಿಲ್ಲ ಎಂದರು.
ಮುಂದಿನ ದಿನಗಳಲ್ಲೂ ಸರ್ಕಾರದಿಂದ ವಿಶೇಷ ಅನುದಾನ ತಂದು ಶಾಶ್ವತ ಕಾಮಗಾರಿಗಳನ್ನು ಹಮ್ಮಿಕೊಂಡು ಕ್ಷೇತ್ರದ ಜನರಿಗೆ ಹಾಗೂ ರೈತಾಪಿ ವರ್ಗದವರಿಗೆ ಅನುಕೂಲ ಕಲ್ಪಿಸುವುದೇ ನನ್ನ ಧ್ಯೇಯವಾಗಿದ್ದು, ಇದಕ್ಕೆ ಕ್ಷೇತ್ರದ ಜನರು ಸಹಕಾರ ನೀಡಬೇಕೆಂದರು.
ಮುಖಂಡರಾದ ವಿಜೇಂದ್ರ, ಸುಧಾಕರ್, ಧನಂಜಯ, ಅಡ್ಡ ರಸ್ತೆ ಗೋಪಿ, ಚಿಕ್ಕತಿಮ್ಮೇಗೌಡ, ಶರತ್, ಶೋಭಾ, ಮುರಳಿ, ಬಾಬು, ರವಿ, ಪ್ರಸನ್ನ, ಚಿಕ್ಕೇಗೌಡ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net