ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಅರ್ಚಕ ನಾರಾಯಣಭಟ್ಟರ್ ಸೇರಿದಂತೆ 6 ಮಂದಿ ವಿರುದ್ಧ ಚೆಲುವನಾರಾಯಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ನೀಡಿದ ದೂರಿನನ್ವಯ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ದೇವಾಲಯದ ವ್ಯವಸ್ಥಾಪನಾ ಸಮಿತಿ ಜೂ.16ರಂದು ತುರ್ತು ಸಭೆ ಸೇರಿ ಅರ್ಚಕ ನಾರಾಯಣಭಟ್ಟ, ಪಾರುತ್ತೇಗಾರ್ ಶ್ರೀಧರ, ಪರಿಚಾರಕ ತಿರುವೇಂಗಡಾಚಾರ್, ಕಾವಲುಗಾರ ಎಂ.ಬಿ ಗಂಗಾಧರ, ಬಸವರಾಜು, ಮಣೇಗಾರ್ ಕಸ್ತೂರಿ ಶ್ರೀನಿವಾಸನ್ ಅವರನ್ನು ಧಾರ್ಮಿಕ ದತ್ತಿ ಕಾಯ್ದೆಯ ನಿಯಮಾವಳಿಯಂತೆ ಅಮಾನತುಗೊಳಿಸಿ ತೆರವಾದ ಹುದ್ದೆಗಳಿಗೆ ಬದಲಿ ವ್ಯವಸ್ಥೆ ಮಾಡಿ ಇಲಾಖೆ ತನಿಖೆ ನಡೆಸಬಹುದೆಂದು ಶಿಫಾರಸ್ಸು ಮಾಡಿತ್ತು. ಒಂದೇ ದಿನದಲ್ಲಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಕುಮಾರ್ ಅಮಾನತು ಆದೇಶ ನೀಡಿದ್ದು, ಜತೆಗೆ ಬದಲಿ ವ್ಯವಸ್ಥೆ ಮಾಡಿದ್ದಾರೆ.