ಮೇಲುಕೋಟೆಯಲ್ಲಿ ಶ್ರಾವಣ ಸಂಭ್ರಮ

ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಭಾನುವಾರ ಮುಗಿಬಿದ್ದ ಭಕ್ತರು.
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಭಾನುವಾರ ಮುಗಿಬಿದ್ದ ಭಕ್ತರು.
Published on

ಮೇಲುಕೋಟೆ: ಮೂರನೇ ಶ್ರಾವಣ ಶನಿವಾರ ಮತ್ತು ಭಾನುವಾರ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಯ ದೇವಾಲಯಗಳಿಗೆ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ದರ್ಶನ ಪಡೆದರು.

ಎರಡೂ ದಿನಗಳಂದು ಬೆಳಗ್ಗೆಯಿಂದ ರಾತ್ರಿವರೆಗೆ ಸಹಸ್ರಾರು ಭಕ್ತರು ಆಗಮಿಸಿ ಸ್ವಾಮಿ ದರ್ಶನ ಪಡೆದು
ಪುನೀತರಾದರು. ಶನಿವಾರ ಬೆಳಗ್ಗೆ ವಾಹನಗಳ ದಟ್ಟಣೆ ಹೆಚ್ಚಾಗಿ ಪಾರ್ಕಿಂಗ್ ಸ್ಥಳಗಳೆಲ್ಲ ತುಂಬಿಹೋದ ಕಾರಣ ಎಸ್‌ಇಟಿ ಪಾಲಿಟೆಕ್ನಿಕ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಭಕ್ತರು ದೇವಾಲಯಕ್ಕೆ ನಡೆದುಕೊಂಡು ಬಂದು ದೇವರ ದರ್ಶನ ಪಡೆದರು. ಭಾನುವಾರ ಪಾರ್ಕಿಂಗ್‌ಗೆ ಯಾವುದೇ ವ್ಯವಸ್ಥೆ ಮಾಡದ ಕಾರಣ ಮತ್ತೆ ಅವ್ಯವಸ್ಥೆ ಕಂಡು ಬಂತು.
ಬೆಳಗಿನ ಐದು ಗಂಟೆಗೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರಿಗೆ ಅನ್ನದಾನ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಗ್ರಾಮಗಳಿಂದ ಟ್ರಾಕ್ಟರ್ ಮೂಲಕ ಬಂದ ದಾನಿಗಳೂ ಸಹ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು. ಭಾನುವಾರವೂ 6ಗಂಟೆಗೆ ನಿತ್ಯಪೂಜೆಯನ್ನು ಮುಗಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net