ಮೊಬೈಲ್‌ನಿಂದ ಮಕ್ಕಳ ಆರೋಗ್ಯಕ್ಕೆ ಹಾನಿಕರ: ಜಿಲ್ಲಾಧಿಕಾರಿ ಡಾ.ಕುಮಾರ ಆತಂಕ

ಮಂಡ್ಯದಲ್ಲಿ ಶೂಟಿಂಗ್ ಅಕಾಡೆಮಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು.
ಮಂಡ್ಯದಲ್ಲಿ ಶೂಟಿಂಗ್ ಅಕಾಡೆಮಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಐಎಂಎ ಭವನದಲ್ಲಿ ಮಂಡ್ಯ ಶೂಟಿಂಗ್ ಅಕಾಡೆಮಿ
  • ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ
ಮಂಡ್ಯ: ಇತ್ತೀಚಿನ ದಿನದಲ್ಲಿ ಮಕ್ಕಳು ಮೊಬೈಲ್ ಬಳಕೆ ಹೆಚ್ಚು ಮಾಡುತ್ತಿದ್ದು, ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಕ್ರೀಡೆ ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಮಾಡಲು ಪಾಲಕರು ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನರಗದ ಐಎಂಎ ಭವನದಲ್ಲಿ ಮಂಡ್ಯ ಶೂಟಿಂಗ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತರಲು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರಣೆ ನೀಡಬೇಕು. ಆ ನಿಟ್ಟಿನಲ್ಲಿ ಮಂಡ್ಯದಲ್ಲಿ ಶೂಟಿಂಗ್ ಅಕಾಡೆಮಿ ಸ್ಥಾಪಿಸಿರುವುದು ಮೆಚ್ಚುಗೆ ವಿಷಯವಾಗಿದೆ. ಮಂಡ್ಯಕ್ಕೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶೂಟಿಂಗ್ ಅಕಾಡೆಮಿ ಕಾರ್ಯದರ್ಶಿ ಡಾ.ಕೆ.ಎಸ್.ಮಹೇಶ್ ಮಾತನಾಡಿ, ಒಲಂಪಿಕ್ ಕ್ರೀಡೆಗೆ ಆಯ್ಕೆಯಾಗಿ ಹೋಗಲೆನ್ನುವ ಉದ್ದೇಶ ಇಟ್ಟುಕೊಂಡು ಅಕಾಡೆಮಿ ಸ್ಥಾಪನೆ ಮಾಡಿದ್ದೇವೆ. ಎಲ್ಲರಿಗೂ ಅವಕಾಶ ಸಿಗಲಿ ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಆರಂಭಿಸಲಾಗಿದೆ ಎಂದರು.
ಮಂಗಳೂರು ಡಿಐಜಿ ಎ.ಎನ್.ಪ್ರಕಾಶ್‌ಗೌಡ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ, ಐಎಂಇ ಅಧ್ಯಕ್ಷ ಡಾ.ಟಿ.ಎನ್.ಮರಿಗೌಡ, ಕಾರ್ಯದರ್ಶಿ ಎಂ.ವಿನಯ್, ಮಂಡ್ಯ ಶೂಟಿಂಗ್ ಅಕಾಡೆಮಿ ಅಧ್ಯಕ್ಷೆ ಡಿ.ಆರ್.ನೇಮಾಂಬ, ಮುಖಂಡರಾದ ಕಾರಸವಾಡಿ ಮಹದೇವು, ಚಿಕ್ಕಸ್ವಾಮಿ, ಅಶೋಕ್, ಶಿವಪ್ರಕಾಶ್‌ಬಾಬು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net