ಗ್ರಾಮದ ರೈತ ಬೆಟ್ಟಸ್ವಾಮಿ ಅವರ 4 ಕುರಿಗಳು ಮೃತಪಟ್ಟಿದ್ದು, 2 ಗಾಯಗೊಂಡಿವೆ. ಮೂರ್ತಿ ಅವರಿಗೆ ಸೇರಿದ 2 ಕುರಿ ಮೃತ ಪಟ್ಟು, 4 ಗಾಯಗೊಂಡಿವೆ. ಜಮೀನಿನ ಬಳಿ ಕುರಿಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ನಾಯಿಗಳು ದಾಳಿ ಮಾಡಿವೆ. ಗ್ರಾಮದಲ್ಲಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ಕುರಿಗಳು ಮೇಲೆ ದಾಳಿ ಮಾಡುತ್ತಿರುವುದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ನಾಯಿಗಳನ್ನು ನಿಯಂತ್ರಿಸಲು ಗ್ರಾಪಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದ್ದಾರೆ.