ದೇವಿಗೆ ಶಾಖಂಬರಿ ಅಲಂಕಾರ

ಪಟ್ಟಣದ ಚಾಮುಂಡೇಶ್ವರಿ ಬೀದಿಯ ಆಲಯದಲ್ಲಿ ಅಷಾಢಮಾಸದ ಮೊದಲನೇ ಶುಭಶುಕ್ರವಾರದ ಪ್ರಯುಕ್ತ ಶಕ್ತಿದೇವಿಯ ಗುಡಿಯನ್ನು ವರ್ಣರಂಜಿತವಾಗಿ ಶಾಖಾಂಬರಿ ಅಲಂಕಾರದಿಂದ ರೂಪುಗೊಳಿಸಿ ಅಧಿದೇವತೆಗೆ ದುರ್ಗಸಪ್ತಶತಿ ಪಾರಾಯಣದೊಂದಿಗೆ ಪೂಜಿಸಿ ಪ್ರಾರ್ಥಿಸಲಾಯಿತು.
ಪಟ್ಟಣದ ಚಾಮುಂಡೇಶ್ವರಿ ಬೀದಿಯ ಆಲಯದಲ್ಲಿ ಅಷಾಢಮಾಸದ ಮೊದಲನೇ ಶುಭಶುಕ್ರವಾರದ ಪ್ರಯುಕ್ತ ಶಕ್ತಿದೇವಿಯ ಗುಡಿಯನ್ನು ವರ್ಣರಂಜಿತವಾಗಿ ಶಾಖಾಂಬರಿ ಅಲಂಕಾರದಿಂದ ರೂಪುಗೊಳಿಸಿ ಅಧಿದೇವತೆಗೆ ದುರ್ಗಸಪ್ತಶತಿ ಪಾರಾಯಣದೊಂದಿಗೆ ಪೂಜಿಸಿ ಪ್ರಾರ್ಥಿಸಲಾಯಿತು.
Published on
ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶಕ್ತಿದೇವತೆಗೆ ಆಷಾಢಮಾಸದ ಮೊದಲ ಶುಕ್ರವಾರ ಪ್ರಯುಕ್ತ ಶಾಖಂಬರಿ ಅಲಂಕಾರವನ್ನು ನೆರವೇರಿಸಲಾಯಿತು.
ಪಟ್ಟಣದ ಚಾಮುಂಡೇಶ್ವರಿ ಬೀದಿಯ ದೇವಾಲಯದಲ್ಲಿ ಗುರುವಾರ ರಾತ್ರಿಯಿಂದಲೇ ಪ್ರಾಂಗಣ ಮತ್ತು ಗರ್ಭಗುಡಿಯನ್ನು ವಿವಿಧ ವಿಶೇಷ ಹೂವುಗಳು ಹಾಗೂ ದಪ್ಪ ಮೆಣಸಿನಕಾಯಿ, ಎಲೆಕೋಸು ಹಾಗೂ ಹಳದಿ ಈರೇಕಾಯಿಗಳನ್ನು ತಲಾ 250ಕೆ.ಜಿಯಂತೆ ಒಟ್ಟು 750ಕೆಜಿ 3 ಬಗೆಯ ತರಕಾರಿಗಳನ್ನು ಬಳಸಿ ವರ್ಣರಂಜಿತವಾಗಿ ಅಲಂಕಾರಗೊಳಿಸಲಾಗಿತ್ತು. ಬಳಿಕ ಪ್ರಾಥಃ ಕಾಲದ ಬ್ರಾಹ್ಮಿ ಮೂಹರ್ತದಲ್ಲಿ ಅಧಿದೇವತೆ ಅಮ್ಮನವರಿಗೆ ದೇಗುಲದ ವೈದಿಕ ಲಕ್ಷ್ಮೀಶ ಶರ್ಮ ನೇತೃತ್ವದಲ್ಲಿ ಫಲ ಪಂಚಾಮೃತ ಅಭಿಷೇಕ, ಮಂಗಳ ದ್ರವ್ಯಗಳಿಂದ ರುದ್ರಾಭಿಷೇಕ, ದುರ್ಗ ಸಪ್ತಶತಿ ಪಾರಾಯಣದೊಂದಿಗೆ ತಾಯಿಯ ಮೂರ್ತಿಗೆ ಸೀರೆ,ವಡವೆಗಳ ಅಲಂಕಾರಗಳೊಂದಿಗೆ ದೀಪಾರತಿ ಅರ್ಪಿಸಿ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಮಂಡ್ಯ, ಮೈಸೂರು ಸೇರಿದಂತೆ ಶ್ರೀರಂಗಪಟ್ಟಣ, ಗಂಜಾಂನ ಸುತ್ತಮುತ್ತಲ ಗ್ರಾಮಗಳ ದೇವಿಯ ಆರಾಧಕರು ದೇಗುಲಕ್ಕೆ ಆಗಮಿಸಿ ಮಾರುದ್ದ ಸರತಿ ಸಾಲಲ್ಲಿ ನಿಂತು ತಾಯಿಗೆ ನೈವೇದ್ಯವಿರಿಸಿ ನಿಂಬೆ ಹಣ್ಣು ಮತ್ತು ಬೆಲ್ಲದ ದೀಪಗಳಿಂದ ಪೂಜಿಸಿ ತಮ್ಮ ಕುಟುಂಬಗಳ ಒಳಿತಿಗೆ ಪ್ರಾರ್ಥಿಸಿದರು. ಬಳಿಕ ಗೋಧೂಳಿ ಲಗ್ನದಲ್ಲಿ ತಾಯಿಗೆ ಮಹಾಮಂಗಳಾರತಿ ಸಹಸ್ರನಾಮ ಪೂಜೆ ಅರ್ಪಿಸಿ ಲೋಕದ ಒಳಿತಿಗೆ ಪ್ರಾರ್ಥಿಸಲಾಯಿತು. ಭಕ್ತರು ಮತ್ತು ಸಾರ್ವಜನಿಕರಿಗೆ ಬೆಳಗಿನಿಂದ ಸಂಜೆವರೆಗೂ ತೀರ್ಥದೊಂದಿಗೆ ಅನ್ನಪ್ರಸಾದ ಹಾಗೂ ಸಿಹಿಯನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net