ಮದ್ದೂರು ತಾಲೂಕಿನ ವರಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಟಿ.ನಂಜುಂಡೇಗೌಡ ವಯೋನಿವೃತ್ತಿ ಹೊಂದಿದ ಸಂಬಂಧ ಶಾಲಾ ಆಡಳಿತ ಮಂಡಳಿ ವತಿಯಿಂದ ಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಅನುಜ್, ಮಾಯಪ್ಪ, ಶಿವಣ್ಣ, ವಿ.ಎಂ.ರವಿ, ರಾಜೀವ್, ನಂಜರಾಜು ಇದ್ದರು.
ಮದ್ದೂರು: ತಾಲೂಕಿನ ವರಗೆರೆಹಳ್ಳಿ ಗ್ರಾಮದ ಪ್ರಮೀಳಾ ವೀರಪ್ಪ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್.ಟಿ.ನಂಜುಂಡೇಗೌಡ ನಿವೃತ್ತಿ ಹೊಂದಿದ ಸಂಬಂಧ ಇತ್ತೀಚೆಗೆ ಶಾಲೆ ಆಡಳಿತ ಮಂಡಳಿ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಖಜಾಂಚಿ ಅನುಜ್ ಮಾತನಾಡಿ, ಎಸ್.ಟಿ.ನಂಜುಂಡೇಗೌಡ 1989 ರಿಂದ 2026 ರವರಿಗೆ ವಿಜ್ಞಾನ ಶಿಕ್ಷಕರಾಗಿ 37 ವರ್ಷಗಳ ಕಾಲ ತಾಲೂಕಿನ ವಿವಿಧ ಶಾಲೆಗಳಲ್ಲಿ ಪ್ರಾಮಾಣಿಕ, ಶ್ರದ್ಧೆಯಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಂದ ಮೆಚ್ಚುಗೆ ಗಳಿಸಿರುವುದು ಪ್ರಶಂಸನೀಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಾದ ಮಾಯಪ್ಪ, ಶಿವಣ್ಣ , ಆಡಳಿತ ಅಧಿಕಾರಿ ವಿ.ಎಂ.ರವಿ, ಶಾಲೆಯ ಶಿಕ್ಷಕರಾದ ರಾಜೀವ್, ನಿವೃತ ವಿಷಯ ಪರಿವಿಕ್ಷಕ ನಂಜರಾಜು, ನಿವೃತ್ತ ಮುಖ್ಯ ಶಿಕ್ಷಕ ಮಾಯಪ್ಪನ, ನಂಜುಂಡೇಗೌಡ, ಸುನಿತಾ, ಗುರು, ಶಿವಣ್ಣ ಇದ್ದರು.