ಅಧ್ಯಯನ ಮಾಡದೇ ನಾಟಕ ರಚನೆ: ಮೈಸೂರಿನ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಬೇಸರ

ಮಂಡ್ಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮೈಸೂರಿನ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮೈಸೂರಿನ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ವಿಚಾರ ಸಂಕಿರಣ
  • ಕರ್ನಾಟಕ ಸಂಘ, ಫಸ್ಟ್ ಸರ್ಕಲ್ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ಇವತ್ತಿಗೂ ನಮ್ಮಲ್ಲಿ ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡದೆ ನಾಟಕಗಳನ್ನು ಬೇರೆ ಕಾರಣಕ್ಕಾಗಿ ಬರೆಯುವ ನಾಟಕಕಾರರಿದ್ದಾರೆ ಎಂದು ಮೈಸೂರಿನ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಹೇಳಿದರು.
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘ, ಫಸ್ಟ್ ಸರ್ಕಲ್ ಸಹಯೋಗದಲ್ಲಿ ಆಯೋಜಿಸಿದ್ದ ಜಯರಾಂ ರಾಯಪುರ ನಾಟಕಗಳ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಚರಿತ್ರೆಯನ್ನು ಓದಿಕೊಂಡು ಬೇಕಾದನ್ನು ಗ್ರಹಿಸಿಕೊಂಡು ಸೃಜನಶೀಲವಾಗಿ ಜಯರಾಂ ರಾಯಪುರ ಅವರು ಸಮಕಾಲೀನವಾಗಿಸುವ ರೀತಿಯಲ್ಲಿ ಬರೆಯುವ ಕಲೆ ಇದೆ. ಒಟ್ಟಾರೆ ಚರಿತ್ರೆಯನ್ನು ನೋಡುವ ಕ್ರಮವನ್ನು ತೋರಿಸುತ್ತಾರೆ ಎಂದು ಶ್ಲಾಘಿಸಿದರು.
ಬದಲಾಗುತ್ತಿರುವ ನಾಟಕದ ಸನ್ನಿವೇಶಗಳು, ರಂಗದ ಅಗತ್ಯತೆಗಳ ಬಗ್ಗೆ ಜಯರಾಂ ರಾಯಪುರ ಅವರು ಬರೆದಿರುವ ನಾಟಕಗಳಲ್ಲಿ ಉತ್ತರವಿದೆ. ಸಿರಿಗೆ ಸೆರೆ, ಚಾವುಂಡರಾಯ, ವಾರಸುದಾರ ಎಂಬ ಮೂರು ನಾಟಕಗಳಲ್ಲಿ ಗಂಭೀರತೆ ಹಾಗೂ ಚರಿತ್ರೆ ಕಾಣಿಸುತ್ತವೆ. ನಾಟಕವನ್ನು ಮಾಡುವಾಗ ಗಂಭೀರತೆ ಎನ್ನುವುದಕ್ಕೆ ಹೆಚ್ಚು ಮಹತ್ವ ಕೊಡಬೇಕು. ಸ್ಥಳೀಯವಾದ ನಾಯಕನನ್ನು ಕುರಿತು ಬರೆಯುವುದು ತುಂಬಾ ಮುಖ್ಯವಾಗಿಸುತ್ತದೆ. ನನ್ನ ತನವನ್ನು ಹೇಗೆ ಹೇಳಬೇಕೆಂಬುದನ್ನು ಹಾಗೂ ಚರಿತ್ರೆಯ ಯಾವ ಪಾತ್ರಗಳು ನಿನ್ನೆಯದಲ್ಲಿ ಇವತ್ತು ಘಟಿಸುತ್ತಿರುವ ಸಂದರ್ಭಗಳು ಎನ್ನುವನ್ನು ಈ ಮೂರು ನಾಟಕಗಳಲ್ಲಿ ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ನಾವು ಬರೆದದ್ದೇ ಶ್ರೇಷ್ಟವಾಗುವುದಿಲ್ಲ. ಕುವೆಂಪು ಹೇಳಿರುವಂತೆ ಯಾರು ಮುಖ್ಯರಲ್ಲ ಹಾಗೂ ಅಮುಖ್ಯರಲ್ಲ ಎನ್ನುವುದನ್ನು ಹೇಳಿದ್ದಾರೆ. ಕುವೆಂಪು ಸಾಹಿತ್ಯ ಅರ್ಥವಾಗಬೇಕಾದರೆ ಬೇರೊಬ್ಬರ ಸಾಹಿತ್ಯವನ್ನು ಓದಬೇಕು. ಓದುವುದು ಭಜನಾ ಮಂಡಳಿಗಳು ಆಗಬಾರದು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಅಧ್ಯಕ್ಷತೆ ವಹಿಸಿದ್ದರು. ನಾಟಕಕಾರರ ಜತೆ ಒಂದು ಸುತ್ತು ಮಾತುಕಥೆ ಸಂವಾದದಲ್ಲಿ ಬೆಂಗಳೂರಿನ ರಂಗಕರ್ಮಿ ಶಶಿಧರ ಭಾರಿಘಾಟ್ ಅವರ ಸಮನ್ವಯದಲ್ಲಿ ರತ್ನಶ್ರೀ, ಫಣಿಮಾಲ, ಎಂ.ಕೆಂಪಮ್ಮ, ಭವಾನಿ ಲೋಕೇಶ್ ಸೇರಿದಂತೆ ಹಲವು ಲೇಖಕರು ಭಾಗವಹಿಸಿದ್ದರು. ಜಯರಾಂ ರಾಯಪುರ ಅವರ ನಾಟಕದ ಆಯ್ದ ಭಾಗಗಳನ್ನು ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕಲಾವಿದರು, ಕರ್ನಾಟಕ ಸಂಘದ ಕಲಾವಿದರು ಪಸ್ತುತಗೊಳಿಸಿದರು. ವಿಶ್ರಾಂತ ಪ್ರಾಂಶುಪಾಲ ಮ.ರಾಮಕೃಷ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್‌ಕುಮಾರ್, ನಿರ್ದೇಶಕ ಕೋಣನಹಳ್ಳಿ ಜಯರಾಮ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net