ಮಂಡ್ಯದ ಕಲ್ಲಹಳ್ಳಿಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಕರಾಟೆ ಉತ್ಸವ ಪ್ರಯುಕ್ತ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯದ ವಿವಿಧೆಡೆಯಿಂದ 1 ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದರು. ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ನೀರಿಕ್ಷಾ ಗ್ರೀನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಹಳದಿ ಬೆಲ್ಟ್ ವಿಭಾಗದಲ್ಲಿ 4ನೇ ತರಗತಿಯ ಹನೀಶ್ ಪ್ರಥಮ ಸ್ಥಾನ, 4ನೇ ತರಗತಿಯ ಚಿಗುರು ತೃತೀಯಾ, ಯಾನ್ವೀ ಮತ್ತು ಯುಗನ್ ತೃತೀಯ ಸ್ಥಾನ ಹಾಗೂ 6ನೇ ತರಗತಿಯ ಸಮರ್ಥ ಹಳದಿ ಬೆಲ್ಟ್ ವಿಭಾಗದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ತರಬೇತುದಾರರಾದ ಗೋಪಿ ಮತ್ತು ಹೇಮಂತ್ ಅವರ ನೇತೃತ್ವದಲ್ಲಿ ಟ್ರೋಫಿ, ಪದಕ ಮತ್ತು ಪ್ರಮಾಣ ಪತ್ರಗಳಿಸಿ ಉತ್ತಮ ಸಾಧನೆಗೈದಿದ್ದಾರೆ.