ಮದ್ದೂರು: ಆಷಾಢ ಮೊದಲ ಶುಕ್ರವಾರದ ಅಂಗವಾಗಿ ನಗರದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮುಂಜಾನೆಯಿಂದಲೆ ಭಕ್ತಾಧಿಗಳು ಆಗಮಿಸಿ ಮಹಿಳೆಯರು ದೇವರಿಗೆ ನಿಂಬೆಹಣ್ಣಿನಾರತಿ, ಮಡಿಲಕ್ಕಿ ನೀಡಿ ಪೂಜೆ ಸಲ್ಲಿಸಿದರು. ಆಷಾಢ ಶುಕ್ರವಾರದ ಅಂಗವಾಗಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಆಗಮಿಸಿದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.