ಆಶಾ ಕಾರ್ಯಕರ್ತೆಯರು ಐಸಿಡಿಎಸ್, ಎನ್‌ಎಚ್‌ಎಂ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಜತೆಗೆ ಜನರ ಆರೋಗ್ಯ ಸುಧಾರಣೆ ವಿಚಾರವಾಗಿ ಮನೆ ಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದರೂ ಇವರಿಗೆ ಉದ್ಯೋಗ ಮಾನ್ಯತೆ ಸಿಕ್ಕಿಲ್ಲ, ಸರಿಯಾದ ಸಮಯಕ್ಕೆ ಗೌರವ ಧನವು ಸಿಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ ಗೌರವ ಧನ ಹೆಚ್ಚಳ ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದರು.