ವಿಬಿ ಜಿ ರಾಮ್ ಜಿ ರದ್ದುಗೊಳಿಸಲು ಪ್ರತಿಭಟನೆ

ನಗರದ ತಾಲೂಕು ಪಂಚಾಯಿತಿ ಕಚೇರಿ ಬಳಿ ವಿಬಿ ಜಿ ರಾಮ್ ಜಿ ರದ್ದುಗೊಳಿಸಿ ಕೂಲಿಗಾರರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಹನುಮೇಶ್, ಟಿ.ಪಿ.ಅರುಣ್‌ಕುಮಾರ್, ಪುಟ್ಟತಾಯಮ್ಮ, ಪ್ರೇಮಾ, ಎಚ್.ಎಸ್.ಮಂಜುನಾಥ್, ಕಮಲಾಕ್ಷಮ್ಮ, ಕೆ.ಆರ್.ರೇಖಾ, ಸಿ.ಕೆ.ಮಮತಾ, ಸುಧಾಮಣಿ, ಚಂದ್ರಕಲಾ ಇದ್ದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಬಳಿ ವಿಬಿ ಜಿ ರಾಮ್ ಜಿ ರದ್ದುಗೊಳಿಸಿ ಕೂಲಿಗಾರರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಹನುಮೇಶ್, ಟಿ.ಪಿ.ಅರುಣ್‌ಕುಮಾರ್, ಪುಟ್ಟತಾಯಮ್ಮ, ಪ್ರೇಮಾ, ಎಚ್.ಎಸ್.ಮಂಜುನಾಥ್, ಕಮಲಾಕ್ಷಮ್ಮ, ಕೆ.ಆರ್.ರೇಖಾ, ಸಿ.ಕೆ.ಮಮತಾ, ಸುಧಾಮಣಿ, ಚಂದ್ರಕಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕೃಷಿ ಕೂಲಿಗಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಆಗ್ರಹ
ಮದ್ದೂರು: ವಿಬಿ ಜಿ ರಾಮ್ ಜಿ ರದ್ದುಗೊಳಿಸಿ ಕೂಲಿಗಾರರಿಗೆ ಕೆಲಸ ಕೊಡುವಂತೆ ಒತ್ತಾಯಿಸಿ ಕರ್ನಾಟಕ ಕೃಷಿ ಕೂಲಿಗಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ತಾಲೂಕು ಸಮಿತಿ ವತಿಯಿಂದ ಬುಧವಾರ ನಗರದ ತಾಲೂಕು ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ನರೇಗಾ ರದ್ದುಗೊಳಿಸಿ ವಿಬಿರಾಮ್‌ಜಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್ ಮಾತನಾಡಿ, ನರೇಗಾ ಉಳಿಸಬೇಕು. ವಿಬಿ ಜಿ ರಾಮ್ ಜಿ ರದ್ದುಗೊಳಿಸಿ, ಇಂದಿನಿಂದಲೇ ಕೂಲಿಗಾರರಿಗೆ ಕೆಲಸ ಕೊಡಬೇಕು. ರಾಜ್ಯ ಸರ್ಕಾರ ಕನಿಷ್ಠ ಕೂಲಿಯನ್ನು ಅನ್ವಯಿಸಿ ಕೂಲಿ ನೀಡಬೇಕು ಅಥವಾ 700 ರೂ. ಕೂಲಿ ನಿಗದಿ ಪಡಿಸಬೇಕೆಂದು ಒತ್ತಾಯಿಸಿದರು.
ಎನ್‌ಎಂಎಂಎಸ್ ಮತ್ತು ಕೆವೈಸಿ ಅಂತ ಅವೈಜ್ಞಾನಿಕ ತಂತ್ರಜ್ಞಾನ ಅಳವಡಿಸುವುದನ್ನು ಕೈ ಬಿಟ್ಟು ಸರಳ ರೀತಿಯಲ್ಲಿ ಕೂಲಿಗಾರರಿಗೆ ಹಾಜರಾತಿ ನೀಡಬೇಕು ಎಂದರು.
ಕೇಂದ್ರ ಸರ್ಕಾರ ಶೇ.60 ಅನುದಾನ ಕೊಡುತ್ತೇನೆಂದು ಹೇಳಿರುವ ರೀತಿ 75 ದಿನದ ಕೆಲಸವನ್ನು ರಾಜ್ಯ ಸರ್ಕಾರವನ್ನು ಅವಲಂಬಿಸದೆ ನೀಡಬೇಕು. ರಾಜ್ಯ ಸರ್ಕಾರ ಈಗಾಗಲೇ ವಿಧಾನಸಭೆಯಲ್ಲಿ ವಿಬಿರಾಮ್‌ಜಿ ಅನುಷ್ಠಾನ ಮಾಡುವುದಿಲ್ಲ ಎಂದು ನಿರ್ಣಯಿಸಿದೆ. ಜತೆಗೆ ನರೇಗಾ ಅಡಿಯಲ್ಲಿ 100 ದಿನದ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕು ಪತ್ರ ನೀಡಬೇಕು. ತಾಲೂಕಿನಾದ್ಯಂತ ನಿವೇಶನ ಕೇಳಿ ಅರ್ಜಿ ಹಾಕಿರುವ ಕೂಲಿಗಾರರಿಗೆ ನಿವೇಶನ ಹಂಚಬೇಕು. ಪ್ರತಿ ಹಳ್ಳಿಗೂ ಸುಸಜ್ಜಿತ ಸ್ಮಶಾನ ಕಲ್ಪಿಸಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬಳಿಕ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಗೂ ಮೊದಲು ನೂರಾರು ಕೃಷಿ ಕೂಲಿ ಕಾರ್ಮಿಕರು ವಿಬಿ ಜಿ ರಾಮ್ ಜಿ ವಿರೋಧಿಸಿ ನಗರದ ಪ್ರವಾಸಿ ಮಂದಿರದಿಂದ ತಾಲೂಕು ಪಂಚಾಯಿತಿ ಕಚೇರಿಯವರಗೆ ಪ್ರತಿಭಟನಾ ಮೆರವಣಿಯಲ್ಲಿ ಆಗಮಿಸಿದರು.
ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಟಿ.ಪಿ.ಅರುಣ್‌ಕುಮಾರ್, ಈರೇಗೌಡ, ಪುಟ್ಟತಾಯಮ್ಮ, ಪ್ರೇಮಾ, ಎಚ್.ಎಸ್.ಮಂಜುನಾಥ್, ಕಮಲಾಕ್ಷಮ್ಮ, ಕೆ.ಆರ್.ರೇಖಾ, ಸಿ.ಕೆ.ಮಮತಾ, ಸುಧಾಮಣಿ, ಚಂದ್ರಕಲಾ, ರಾಜು, ವೈ.ಕೆ.ಗೋಪಾಲಸ್ವಾಮಿ, ಗಾಳಿ ಹೊನ್ನಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net