200 ದಿನ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ

ಮದ್ದೂರು ನಗರಸಭೆಗೆ ಗೊರವನಹಳ್ಳಿ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ 200 ದಿನಗಳನ್ನು ಪೂರೈಸಿತು. ಶಿವಪ್ಪ, ಮಹೇಶ್, ರವಿ, ಕುಳ್ಳಪ್ಪ, ಕೃಷ್ಣ, ಸಂತೋಷ್, ಪ್ರಮೋದ್, ಮಹೇಶ್, ಅವಿನಾಶ್, ಗೌರಮ್ಮ, ರಾಜಶೇಖರ್, ಸುಜಯಾ,  ಕಲಾವತಿ, ಸಿದ್ದರಾಜು ಇದ್ದರು.

Published on
ಮದ್ದೂರು: ನಗರಸಭೆಗೆ ಗೊರವನಹಳ್ಳಿ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರ 200 ದಿನಗಳನ್ನು ಪೂರೈಸಿತು.
ಪ್ರತಿಭಟನೆಯ ನೇತೃತ್ವವಹಿಸಿದ್ದ ಗ್ರಾಮದ ಮುಖಂಡ ಶಿವಪ್ಪ ಮಾತನಾಡಿ, ಮದ್ದೂರು ನಗರಸಭೆಗೆ ಗೊರವನಹಳ್ಳಿ ಗ್ರಾಪಂ ಅನ್ನು ಸೇರ್ಪಡೆಗೊಳಿಸಿರುವ ಕ್ರಮ ಖಂಡಿಸಿ 200 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಾ ಬಂದಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆಯನ್ನು ಬಗೆಹರಿಸಲು ಗಮನಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಗ್ರಾಮವನ್ನು ಗ್ರಾಪಂ ಹಾಗೆ ಉಳಿಸಬೇಕು, ನಮ್ಮ ಗ್ರಾಮ ಗ್ರಾಮವಾಗಿಯೇ ಉಳಿಯಬೇಕು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಗೊರವನಹಳ್ಳಿ ನಗರಸಭೆಗೆ ಸೇರ್ಪಡೆಯಾದರೆ ಗ್ರಾಮೀಣ ಕೃಪಾಂಕ, ನರೇಗಾ ಸೇರಿದಂತೆ ಹಲವಾರು ಸೌಲಭ್ಯಗಳಿಂದ ಗ್ರಾಮಸ್ಥರು ವಂಚಿತರಾಗಬೇಕಾಗುತ್ತದೆ. ಅಷ್ಟೇ ಅಲ್ಲದೆ ವಿವಿಧ ರೀತಿಯ ಕಂದಾಯಗಳು ಹೆಚ್ಚಾಗುತ್ತವೆ.ನಗರಸಭೆಯಿಂದ ಗೊರವನಹಳ್ಳಿಯನ್ನು ಕೈಬಿಡುವವರೆಗೂ ಅನಿರ್ದಿಷ್ಟಾವಧಿ ಧರಣಿಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಅನಿರ್ದಿಷ್ಟಾವಧಿ ಧರಣಿ 200 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ಗ್ರಾಮಸ್ಥರು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದ ಮುಖಂಡರಾದ ಮಹೇಶ್, ರವಿ, ಕುಳ್ಳಪ್ಪ, ಕೃಷ್ಣ, ಸಂತೋಷ್, ಪ್ರಮೋದ್, ಮಹೇಶ್, ಅವಿನಾಶ್, ಗೌರಮ್ಮ, ರಾಜಶೇಖರ್, ಸುಜಯಾ, ಕಲಾವತಿ, ಸಿದ್ದರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net