ರೈತ ಸಂಘದಿಂದ ವಾಹನ ಸಂಚಾರ ತಡೆದ ಪ್ರತಿಭಟನೆ

ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದ ರೈತರಿಗೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ತಾಲೂಕಿನ ಬೆಸಗರಹಳ್ಳಿಯ ಅಡ್ಡರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರಭುಲಿಂಗು, ಶಿವಲಿಂಗು, ಎಚ್.ಎಲ್.ದಯಾನಂದ, ಕೆ.ಜಿ.ಉಮೇಶ್, ಗೋಪಿ, ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ರಾಮಕೃಷ್ಣ, ಚನ್ನಪ್ಪ ಇದ್ದರು.
ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದ ರೈತರಿಗೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ತಾಲೂಕಿನ ಬೆಸಗರಹಳ್ಳಿಯ ಅಡ್ಡರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರಭುಲಿಂಗು, ಶಿವಲಿಂಗು, ಎಚ್.ಎಲ್.ದಯಾನಂದ, ಕೆ.ಜಿ.ಉಮೇಶ್, ಗೋಪಿ, ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ರಾಮಕೃಷ್ಣ, ಚನ್ನಪ್ಪ ಇದ್ದರು.
Published on
ಮದ್ದೂರು: ಕೆಆರ್‌ಎಸ್ ಜಲಾಶಯದಲ್ಲಿ 104 ಅಡಿಗೂ ಹೆಚ್ಚಿನ ಪ್ರಮಾಣದ ನೀರಿದ್ದರೂ ಅಧಿಕಾರಿಗಳು ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದ ರೈತರಿಗೆ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ತಾಲೂಕಿನ ಬೆಸಗರಹಳ್ಳಿಯ ಅಡ್ಡರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗಗಳಾದ ಬೆಸಗರಹಳ್ಳಿ, ಹೊಸಕೆರೆ, ಆನೆದೊಡ್ಡಿ, ಕೊತ್ತನಹಳ್ಳಿ, ಸೊಳ್ಳೆಪುರ ಸೇರಿದಂತೆ ವಿವಿಧ ಭಾಗಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ರೈತರು ಬುಧವಾರ ಬೆಸಗರಹಳ್ಳಿ ಅಡರಸ್ತೆಯಲ್ಲಿ ಮದ್ದೂರು-ಕೊಪ್ಪ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಕೆಲಕಾಲ ವಾಹನ ಸವಾರರು ಪರದಾಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು ಮಾತನಾಡಿ, ತಾಲೂಕಿನ ಕೊಪ್ಪ ಹಾಗೂ ಬೆಸಗರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಮರ್ಪಕವಾಗಿ ನೀರು ಹರಿಸದ ಪರಿಣಾಮ ಬೆಳೆಗಳು ಒಣಗಿ ನಿಂತಿದ್ದು, ಈಗಾಗಲೇ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಬೆಳೆದು ನಿಂತಿರುವ ಬೆಳೆಗಳಿಗೆ ಈ ಕೂಡಲೇ ನೀರು ಹರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಕೆಆರ್‌ಎಸ್ ಜಲಾಶಯದಲ್ಲಿ 66 ಅಡಿ ನೀರಿದ್ದರೂ ಕೊನೆಯ ಭಾಗಕ್ಕೆ ಬರುತ್ತಿತ್ತು. ಆದರೆ, ಇದೀಗ 104 ಅಡಿ ನೀರಿದ್ದರೂ ರೈತರ ಬೇಸಾಯಕ್ಕೆ ಏಕೆ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಮುಂದಿನ 8 ದಿನದೊಳಗಾಗಿ ವಿಶ್ವೇಶ್ವರಯ್ಯ ನಾಲೆ ಕೊನೆ ಭಾಗಗಳಿಗೆ ನೀರು ಹರಿಸಿ,ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮುಂದಾಗದಿದ್ದಲ್ಲಿ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಎಇಇ ಅಜಯ್ ಮನವಿ ಸ್ವೀಕರಿಸಿ ಮಾತನಾಡಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ.ಪ್ರಕಾಶ್, ಪ್ರಭುಲಿಂಗು, ಶಿವಲಿಂಗು, ಎಚ್.ಎಲ್.ದಯಾನಂದ, ಕೆ.ಜಿ.ಉಮೇಶ್, ಗೋಪಿ, ಕೀಳಘಟ್ಟ ನಂಜುಂಡಯ್ಯ, ಸೊ.ಶಿ.ಪ್ರಕಾಶ್, ರಾಮಕೃಷ್ಣ, ಚನ್ನಪ್ಪ, ವೆಂಕಟೇಶ್, ಮುತ್ತುರಾಜು, ಜಯರಾಮು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net