ಮದ್ದೂರು ನಗರ ದಿನೇ ದಿನೇ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ಜನಸಂಖ್ಯೆ ಹಾಗೂ ವಹಿವಾಟಿನ ಪ್ರಮಾಣವು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟಿ.ಬಿ.ಸರ್ಕಲ್‌ನಿಂದ ಕೊಲ್ಲಿ ಸರ್ಕಲ್‌ವರೆಗಿನ ಪೇಟೆ ಬೀದಿಯಲ್ಲಿ ಜನರು ಮತ್ತು ವಾಹನಗಳ ಭಾರಿ ಜಂಗುಳಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆ ಅಗತ್ಯವಾಗಿತ್ತು. ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆಯಾದ ಈ ಯೋಜನೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.