ಬಹುಮಾನ ಪಡೆದ ತಂಡಗಳ ವಿವರ: ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕ ವಿಷಯವಾಗಿ ರಚಿಸಲ್ಪಟ್ಟ ಮಾಡೆಲ್‌ಗಳ ಪೈಕಿ, ಬೆಂಗಳೂರು ನಗರೂರಿನ ಶ್ರೀ ಆದಿಚುಂಚನಗಿರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಥಮ ಸ್ಥಾನ, ನಾಗಮಂಗಲ ಬಿಜಿ ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ದ್ವಿತೀಯ ಸ್ಥಾನ, ನಾಗಮಂಗಲ ಎಸ್‌ಎಸಿ ಕಾಲೇಜು ತೃತೀಯ ಸ್ಥಾನ ಹಾಗೂ ಬಿಜಿ ನಗರದದ ಬಿ.ಎಡ್ ಕಾಲೇಜು ನಾಲ್ಕನೇ ಸ್ಥಾನ ಪಡೆಯಿತು.