ದುರ್ಬಲರನ್ನು ಮೇಲೆತ್ತಲು ಆದ್ಯತೆ

ಕಿಕ್ಕೇರಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ನೂತನ  ತಾಲೂಕು ಯೋಜನಾಧಿಕಾರಿ ಬಿ. ಶ್ರೀನಿವಾಸಗೌಡ(ಮ ಅಧಿಕಾರ ಸ್ವೀಕರಿಸಿದರು. ಪ್ರಸಾದ್, ಚಾಮರಾಜ, ಶಶಿಕುಮಾರ್ ಇತರರಿದ್ದರು.
ಕಿಕ್ಕೇರಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ನೂತನ ತಾಲೂಕು ಯೋಜನಾಧಿಕಾರಿ ಬಿ. ಶ್ರೀನಿವಾಸಗೌಡ(ಮ ಅಧಿಕಾರ ಸ್ವೀಕರಿಸಿದರು. ಪ್ರಸಾದ್, ಚಾಮರಾಜ, ಶಶಿಕುಮಾರ್ ಇತರರಿದ್ದರು.
Published on
ಕಿಕ್ಕೇರಿ: ಆರ್ಥಿಕವಾಗಿ ದುರ್ಬಲರಾದವರನ್ನು ಮೇಲೆತ್ತಿ ಮುಖ್ಯವಾಹಿನಿಗೆ ತರುವ ಕೆಲಸ ಸಂಸ್ಥೆಯ ಗುರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಬಿ. ಶ್ರೀನಿವಾಸಗೌಡ ತಿಳಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಯಾಗಿ ನಿರ್ಗಮಿತ ಯೋಜನಾಧಿಕಾರಿಯಾದ ಪ್ರಸಾದ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿ, ಈ ಮೊದಲು ದಾವಣಗೆರೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಿಕ್ಕೇರಿ ಕ್ಷೇತ್ರದಲ್ಲಿ 2467 ಸ್ವಸಹಾಯ ಸಂಘಗಳಿವೆ. 25 ಜ್ಞಾನವಿಕಾಸ ಕೇಂದ್ರಗಳಿವೆ. ಸಂಘದ ಸದಸ್ಯರಿಂದಲೇ ಸಮುದಾಯದ ಹಿಂದುಳಿದವರನ್ನು ಮೇಲೆತ್ತುವ ಕೆಲಸ ಮಾಡಲಾಗುವುದು ಎಂದರು.
ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬನೆಗಾಗಿ ಗುಡಿ ಕೈಗಾರಿಕೆ, ಹೈನುಗಾರಿಕೆ ಅಭಿವೃದ್ಧಿ, ನೂತನ ಕೃಷಿ ವಿಧಾನ ಅಳವಡಿಕೆ, ದೇಗುಲ ಜೀರ್ಣೋದ್ಧಾರ, ಮಧ್ಯವರ್ಜನಾ ಶಿಬಿರ, ಶ್ರದ್ಧಾ ಕೇಂದ್ರಗಳ ಶ್ರಮದಾನದಂತಹ ಹಲವು ಕಾರ್ಯಕ್ರಮಗಳ ಜತೆಗೆ ಕೆರೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ನುಡಿದರು.
ನಿರ್ಗಮಿತ ತಾಲೂಕು ಯೋಜನಾಧಿಕಾರಿ ಪ್ರಸಾದ್, ಹಣಕಾಸು ಪ್ರಬಂಧಕ ಚಾಮರಾಜ, ಆಡಳಿತ ಪ್ರಬಂಧಕ ರಾಘವೇಂದ್ರ, ವಿಚಕ್ಷಣಾಧಿಕಾರಿ ಶಶಿಕುಮಾರ್, ಮೇಲ್ವಿಚಾರಕಿ ನಂದಿನಿ, ಶರತ್, ಕಿರಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net