ಜಾತ್ಯತೀತ ಜನತಾದಳದ ಯುವ ಮುಖಂಡ ಜಗದೀಶ್, ಪತ್ನಿ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕಿ ಅಮೂಲ್ಯಾ ಜಗದೀಶ್ ಒಳಗೊಂಡಂತೆ ಯುವಕರ ತಂಡ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಕೆ.ಎಂ.ಉದಯ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಅಣ್ಣೂರು ರಾಜೀವ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್‌ಬಾಬು, ನಗರಸಭೆ ಮಾಜಿ ಸದಸ್ಯರಾದ ಕೃಷ್ಣಪ್ಪ, ಎಂ.ಬಿ.ಸಚಿನ್, ಸ್ಥಳೀಯ ಮುಖಂಡರಾದ ಸಿದ್ದಪ್ಪ, ಜೈಪ್ರಕಾಶ್, ಇತರರಿದ್ದರು.