ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪರಂಪರೆ ಉಳಿಸಿರಿ

ಕಿಕ್ಕೇರಿಯ ಬ್ರಹ್ಮೇಶ್ವರ ದೇಗುಲದಲ್ಲಿನ ನಶಿಸುತ್ತಿರುವ ಕಲ್ಯಾಣಿಯನ್ನು ಬೆಂಗಳೂರಿನ ಗಂಧದಗುಡಿ ರೋಟರಿ ಕ್ಲಬ್ ಸದಸ್ಯರು ವೀಕ್ಷಿಸಿದರು. ಕಿಕ್ಕೇರಿ ಕೃಷ್ಣಮೂರ್ತಿ, ಅಮೀಬಾ ಸುರೇಶ್, ಅಚ್ಯುತ್, ವಿಜಯರಾಜ್, ಅರುಣ್, ಸಂದೀಪ್, ಕಿಶೋರ್ ಮತ್ತಿತರರಿದ್ದರು.
ಕಿಕ್ಕೇರಿಯ ಬ್ರಹ್ಮೇಶ್ವರ ದೇಗುಲದಲ್ಲಿನ ನಶಿಸುತ್ತಿರುವ ಕಲ್ಯಾಣಿಯನ್ನು ಬೆಂಗಳೂರಿನ ಗಂಧದಗುಡಿ ರೋಟರಿ ಕ್ಲಬ್ ಸದಸ್ಯರು ವೀಕ್ಷಿಸಿದರು. ಕಿಕ್ಕೇರಿ ಕೃಷ್ಣಮೂರ್ತಿ, ಅಮೀಬಾ ಸುರೇಶ್, ಅಚ್ಯುತ್, ವಿಜಯರಾಜ್, ಅರುಣ್, ಸಂದೀಪ್, ಕಿಶೋರ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಗಂಧದಗುಡಿ ರೋಟರಿ ಕ್ಲಬ್ ನಿರ್ದೇಶಕ ವಿಜಯರಾಜ್ ಹೇಳಿಕೆ
ಕಿಕ್ಕೇರಿ: ನಾಡಿನ ಪರಂಪರೆ ಉಳಿಯಲು ಎಲ್ಲರೂ ಒಂದಾದರೆ ಮಾತ್ರ ಭವಿಷ್ಯದ ಮಕ್ಕಳಲ್ಲಿ ಇತಿಹಾಸ, ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ ಎಂದು ಬೆಂಗಳೂರು ಗಂಧದಗುಡಿ ರೋಟರಿ ಕ್ಲಬ್ ನಿರ್ದೇಶಕ ವಿಜಯರಾಜ್ ತಿಳಿಸಿದರು.
ಇಲ್ಲಿನ ಬ್ರಹ್ಮೇಶ್ವರ ದೇಗುಲದಲ್ಲಿರುವ ಕಲ್ಯಾಣಿಯನ್ನು ಇತ್ತೀಚೆಗೆ ತಮ್ಮ ತಂಡದೊಂದಿಗೆ ವೀಕ್ಷಿಸಿ ಮಾತನಾಡಿದರು.
ಪುರಾತನವಾದ ಹೊಯ್ಸಳರ ಕಾಲದ ಬ್ರಹ್ಮೇಶ್ವರ ದೇಗುಲವಾಗಿದೆ. ಆಮೆಯಾಕೃತಿಯಲ್ಲಿರುವ ದೇಗುಲದ ಶಿಲ್ಪಕಲಾಕೃತಿ ಮೋಹಕವಾಗಿದೆ. ನಿರ್ವಹಣೆ ಕಾಣದೆ ಬಹುತೇಕ ಹಾಳಾಗಿವೆ ಎಂದರು.
ಕಿಕ್ಕೇರಿ ನೋಡಿಯೇ ಇರಲಿಲ್ಲ. ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ತವರೂರು ಎಂದು ತಿಳಿಯಿತು. ಕೆ.ಎಸ್.ನ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಅವರ ಮನವಿಗಾಗಿ ಗ್ರಾಮಕ್ಕೆ ಬರಲಾಗಿದೆ. ಸುಂದರ ದೇಗುಲ, ಪ್ರಕೃತಿ ತಾಣ ನೋಡಿ ಖುಷಿಯಾಗಿದೆ. ಇಲ್ಲಿನ ಕಲ್ಯಾಣಿ ಅತ್ಯಂತ ಸುಂದರವಾಗಿದೆ. ಹಳೆಯ ಐತಿಹಾಸಿಕ ಪರಂಪರೆಯ ಹೆಗ್ಗುರುತಾಗಿ ಈ ಕಲ್ಯಾಣಿ ಇದೆ. ಕಲ್ಲು ಚಪ್ಪಡಿಗಳ ಜೋಡಣೆಯಿಂದ ಅಚ್ಚುಕಟ್ಟಾಗಿ ನಿರ್ಮಿತವಾಗಿದೆ ಎಂದರು.
ಬ್ರಹ್ಮೇಶ್ವರ ದೇಗುಲದ ಕಲ್ಯಾಣಿ ಬಹುತೇಕ ಹಾಳಾಗಿದೆ. ಹೂಳು ತುಂಬಿ ಕಲ್ಯಾಣಿ ನೀರು ಅನುಪಯುಕ್ತವಾಗಿದ್ದು, ಈ ಕಲ್ಯಾಣಿ ನೀರು ಸಮರ್ಪಕವಾಗಿ ಬಳಕೆಯಾಗಬೇಕು ಎಂಬುದು ತಮ್ಮ ಸಂಸ್ಥೆ ಆಶಯವಾಗಿದೆ. ಕಲ್ಯಾಣಿಗೆ ಮರುಜೀವ ನೀಡಲು ನವೀಕರಣ, ಜೀರ್ಣೋದ್ಧಾರ. ಪೂಜೆ, ಪುನಸ್ಕಾರದಂತಹ ವಿವಿಧ ಪೂಜೆ ಕೈಂಕರ್ಯಕ್ಕೆ ಬಳಕೆಯಾಗುವಂತೆ ಮಾಡಲು ಸಿದ್ಧರಿದ್ದೇವೆ. ಇಲ್ಲಿನ ಸ್ಥಳೀಯರ ಸಕಾರಾತ್ಮಕ ಸಹಕಾರ ನೀಡಿದರೆ ಕಲ್ಯಾಣಿ ಜೀರ್ಣೋದ್ಧಾರಕ್ಕೆ ಸಿದ್ಧವಿರುವುದಾಗಿ ಹೇಳಿದರು.
ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಅಮೀಬಾ ಗ್ರೂಪ್ಸ್‌ನ ಸಿಇಒ ಸುರೇಶ್, ಬೃಹತ್ ಇನ್‌ಫೋಕಾಂ ಸಿಇಒ ಅಚ್ಯುತ್, ಬೆಂಗಳೂರಿನ ರೋಟರಿ ಗಂಧದಗುಡಿ ಸಂಸ್ಥೆ ನಿರ್ದೇಶಕರಾದ ಅರುಣ್, ಸಂದೀಪ್, ಕಿಶೋರ್, ವಿಜಯರಾಜ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net