ಬರ ಪಟ್ಟಿಯಲ್ಲಿ ಪಾಂಡವಪುರ ಘೋಷಣೆ ಸಾಧ್ಯತೆ

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಇತರರು ಇದ್ದರು.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಶ್ವಾಸ
  • ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಪಾಂಡವಪುರ: ರಾಜ್ಯ ಸರ್ಕಾರ ಎರಡನೇ ಹಂತದ ಬರ ಪಟ್ಟಿಯಲ್ಲಿ ಪಾಂಡವಪುರ ತಾಲೂಕನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ವಿವಿಧೆಡೆ 8 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ನಾಲೆ (ವಿ.ಸಿ. ನಾಲೆ) ವ್ಯಾಪ್ತಿಯ ಉಪ ನಾಲೆಗಳ ಅಭಿವೃದ್ಧಿ ಹಾಗೂ ಬೇಬಿ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಘೋಷಿಸಿದ ಮೊದಲ ಬರಪಟ್ಟಿಯಲ್ಲಿ ಪಾಂಡವಪುರ ತಾಲೂಕನ್ನು ಕೈಬಿಟ್ಟಿತ್ತು. ಬಳಿಕ ಕಂದಾಯ ಹಾಗೂ ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆದು ಚರ್ಚಿಸಿದ ಪರಿಣಾಮ ಸರ್ಕಾರ 2ನೇ ಪಟ್ಟಿಯಲ್ಲಿ ಪಾಂಡವಪುರ ತಾಲೂಕನ್ನು ಸೇರ್ಪಡೆಗೊಳಿಸುವ ಆಶಾಭಾವನೆ ಇದೆ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ನಾಲೆ (ವಿಸಿ) ಉಪ ನಾಲೆಗಳ ಅಭಿವೃದ್ಧಿ: ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸಲು ವಿಶ್ವೇಶ್ವರಯ್ಯ ನಾಲೆಯ ಉಪ ನಾಲೆಗಳನ್ನು 8 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 2 ಕೋಟಿ ರೂ.ವೆಚ್ಚದಲ್ಲಿ ಹರವು ಗ್ರಾಮದ ಎಲ್‌ಬಿಎಲ್ ನಾಲೆ, 2 ಕೋಟಿ ರೂ.ವೆಚ್ಚದಲ್ಲಿ ಚಿಕ್ಕಾಡೆ ಪಂಚಾಯಿತಿ ವ್ಯಾಪ್ತಿಯ ಕುಂತಿಬೆಟ್ಟದ ಬಳಿಯ ಕಾಚೇನಹಳ್ಳಿ ಬ್ರಾಂಚ್ ಉಪ ನಾಲೆ, 2 ಕೋಟಿ ರೂ.ವೆಚ್ಚದಲ್ಲಿ ಶಿಥಿಲಗೊಂಡಿದ್ದ ಪಟ್ಟಸೋಮನಹಳ್ಳಿ ಭಾಗದ 3ನೇ ಪಿಕಪ್ ನಾಲೆ ಚಿಕ್ಕಾಡೆ ಗ್ರಾಮದ 2ನೇ ಪಿಕಪ್ ನಾಲೆಗೆ ರಕ್ಷಣಾ ಗೋಡೆ ಕಾಮಗಾರಿ, 1ನೇ ಪಿಕಪ್ ನಾಲೆಯಲ್ಲಿ ಬಾಕ್ಸ್ ಡ್ರೈನ್‌ಗಳ ಕಾಮಗಾರಿ, 2ನೇ ಪಿಕಪ್ ನಾಲೆಯಲ್ಲಿ ಗಾಡಿ ಸೇತುವೆ ಕಾಮಗಾರಿ ಹಾಗೂ 2 ಕೋಟಿ ರೂ.ವೆಚ್ಚದಲ್ಲಿ ಹಿರೇಮರಳಿ ಪಂಚಾಯಿತಿ ವ್ಯಾಪ್ತಿಯ ಹಿರೇಮರಳಿ ಪಾಯಿಂಟ್ ಕಾಮಗಾರಿ, ನುಗ್ಗಹಳ್ಳಿ ಹಾಗೂ ಹಿರೇಮರಳಿ ವಿತರಣಾ ನಾಲೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾವೇರಿ ನೀರಾವರಿ ನಿಗಮದ ಎಇ ಹೊನ್ನೋಜಿರಾವ್, ರೈತ ಸಂಘದ ಮುಖಂಡರಾದ ಹರವು ಪ್ರಕಾಶ್, ಗೋವಿಂದರಾಜು, ಚಿಕ್ಕಾಡೆ ಹರೀಶ್, ರಘು, ವಿಜೇಂದ್ರ, ಪ್ರಸನ್ನಕುಮಾರ್, ಹಿರೇಮರಳಿ ಎಲ್‌ಐಸಿ ಕೃಷ್ಣಮೂರ್ತಿ, ಎಚ್.ಇ.ರವಿಕುಮಾರ್, ವಿಜೇಂದ್ರ, ಸತ್ಯ, ಸುನೀಲ್, ಮಲ್ಲಿಕಾರ್ಜುನ್, ಷಣ್ಮುಖ, ಗುತ್ತಿಗೆದಾರರಾದ ನರಸಿಂಹಸ್ವಾಮಿ, ಹರಳಹಳ್ಳಿ ಹರ್ಷ, ದುದ್ದ ಹೋಬಳಿಯ ಬೀರಗೌಡನಹಳ್ಳಿ ಹರ್ಷ, ಕೀರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net