ಹಿಂದುಳಿದ ವರ್ಗಗಳು ಮುಖ್ಯವಾಹಿನಿಗೆ ಬರಲಿ: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಸಲಹೆ

  ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.
ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಪ್ರವಾಸಿ ಮಂದಿರದಲ್ಲಿ ಸಮಾಲೋಚನಾ ಸಭೆ
  • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಆಯೋಜನೆ
ಮಂಡ್ಯ: ಹಿಂದುಳಿದ ವರ್ಗಗಳು ಸ್ಥಳೀಯ ಸಂಸ್ಥೆಯ ಮೀಸಲಾತಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಹಿಂದುಳಿದ ವರ್ಗಗಳ ಮುಖಂಡರ ರಾಜಕೀಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ಮೀಸಲಾತಿ ನಿಗದಿಯಾಗಿದೆ. ಹಿಂದುಳಿದ ಸಮುದಾಯದ ಉತ್ಸಾಹಿ ಯುವಕರು, ಪ್ರಬುದ್ದರು ಮತ್ತು ಮಹಿಳೆಯರು ಸ್ವಯಂಪ್ರೇರಣೆಯಿಂದ ಸ್ಥಳೀಯ ರಾಜಕಾರಣವನ್ನು ಪ್ರವೇಶಿಸಿ ಉತ್ತಮವಾದ ಆಡಳಿತವನ್ನು ನೀಡುವುದರ ಮೂಲಕ ಹಿಂದುಳಿದ ಸಮುದಾಯದ ಘನತೆಯನ್ನು ಎತ್ತಿ ಹಿಡಿಯಬೇಕಿದೆ ಎಂದು ಹೇಳಿದರು.
ಪಂಚಾಯಿತಿ ಚುನಾವಣೆ ಅತ್ಯಂತ ಸೂಕ್ಷ್ಮವಾದ ಹಿನ್ನೆಲೆ ಹೊಂದಿದ್ದು, ಆಕಾಂಕ್ಷಿತರು ಎಲ್ಲ ಸಮುದಾಯದ ವಿಶ್ವಾಸವನ್ನು ಗಳಿಸಿ ಚುನಾವಣೆಯನ್ನು ಗೆಲ್ಲಬೇಕಾಗಿದೆ. ಇದಕ್ಕೆ ಪೂರಕವಾಗಿ ವಾತಾವರಣವನ್ನು ಸೃಷ್ಟಿಸುವ ಹಿನ್ನೆಲೆಯಲ್ಲಿ ಡಿ.ದೇವರಾಜ ಅರಸು ವೇದಿಕೆಯು ಎಲ್ಲ ತಾಲೂಕು ಕೇಂದ್ರಗಳಲ್ಲಿ ಜಾಗೃತಿ ಸಭೆ ನಡೆಸಲಿದೆ. ಗ್ರಾ.ಪಂ. ಚುನಾವಣೆಯಲ್ಲಿ ಹಿಂದುಳಿದ ಸಮುದಾಯದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿ ಮಾರ್ಗದರ್ಶನ ಹಾಗೂ ಪೂರ್ವ ಸಿದ್ಧತಾ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ಗ್ರಾಪಂ ಮಾಜಿ ಸದಸ್ಯರಾದ ಮಂಡಿಬೆಟ್ಟಹಳ್ಳಿ ಬಸವರಾಜು, ಮಹೇಶ್, ತೂಬಿನಕೆರೆ ಮಲ್ಲೇಶ್, ಕಡಿಲುವಾಗಿಲು ಮಂಚಶೆಟ್ಟಿ, ಗೊರವಾಲೆ ಶಿವಣ್ಣ, ಬಸವರಾಜು, ಕಾಂತರಾಜು, ಮಂಗಲ ನಾಗರಾಜು ಮಾತನಾಡಿದರು. ವಿವಿಧ ಸಂಘಟನೆ ಮುಖಂಡರಾದ ಎಂ.ಕೃಷ್ಣ, ಎನ್.ದೊಡ್ಡಯ್ಯ, ಅಮ್ಜದ್‌ಪಾಷ, ಸಂತೆಕಸಲಗೆರೆ ಶ್ರೀನಿವಾಸ್, ಬಸವರಾಜು, ಕೊಡಿಯಾಲ ಲೋಕೇಶ್, ಡಿ.ರಮೇಶ್, ಅಮ್ಜದ್‌ಪಾಷ, ಪ್ರದೀಪ್ ಯಲಿಯೂರು, ಶಿವಮಾಧು, ದಾಸಪ್ಪ, ಎಂ.ಎಸ್. ರಾಜಣ್ಣ, ಮಂಜುನಾಥ್, ದ್ಯಾಪಸಂದ್ರ ರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net