ದನ ಮೇಯಿಸುವ ತಾಣವಾದ ಉದ್ಯಾನಗಳು

ಪಾಂಡವಪುರ ತಾಲೂಕಿನ ಚಿನಕುರಳಿಯ ಉದ್ಯಾನದ ಪರಿಸರದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಮತ್ತು ಟೆಟ್ರಾ ಪ್ಯಾಕ್‌ಗಳು.
ಪಾಂಡವಪುರ ತಾಲೂಕಿನ ಚಿನಕುರಳಿಯ ಉದ್ಯಾನದ ಪರಿಸರದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಮತ್ತು ಟೆಟ್ರಾ ಪ್ಯಾಕ್‌ಗಳು.
Published on

ಪ್ರಮುಖ ಮುಖ್ಯಾಂಶಗಳು

  • ಚಿನಕುರಳಿಯಲ್ಲಿ ನಾಲ್ವರು ಮಹನೀಯರ ಹೆಸರಲ್ಲಿ ನಿರ್ಮಾಣ ಮಾಡಿ ನಿರ್ವಹಣೆ ಮರೆತರು
ಪಾಂಡವಪುರ: ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ರಾಜ್ಯದ ನಾಲ್ವರು ಮಹನೀಯರ ಹೆಸರಲ್ಲಿ ನಿರ್ಮಿಸಿರುವ ಉದ್ಯಾನಗಳು ನಿರ್ವಹಣೆ ಇಲ್ಲದೇ ಅಧ್ವಾನಗೊಂಡಿವೆ.
ಚಿನಕುರಳಿ ಗ್ರಾಮದ ಹೊರವಲಯದಲ್ಲಿ ರಾಷ್ಟ್ರಕವಿ ಕುವೆಂಪು, ಆದಿಚುಂಚನಗಿರಿ ಮಠದ ಭೈರವೈಕ್ಯ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಧರ್ಮಸ್ಥಳದ ವಿರೇಂದ್ರಹೆಗ್ಗಡೆ ಅವರ ಹೆಸರಿನಲ್ಲಿ ಸಣ್ಣ ನೀರಾವರಿ ಇಲಾಖೆ ಅನುದಾನದಲ್ಲಿ ನಾಲ್ಕು ಉದ್ಯಾನ ನಿರ್ಮಿಸಲಾಗಿದ್ದು, ಈ ಎಲ್ಲ ಉದ್ಯಾನಗಳು ನಿರ್ವಹಣೆ ಇಲ್ಲದೇ ದನ-ಕರುಗಳ ಮೇಯಿಸುವ ಸ್ಥಳವಾಗಿವೆ. ಕುಡುಕರು ಮತ್ತು ಪುಂಡ ಪೋಕರಿಗಳ ಅಡ್ಡೆಯಾಗಿ ಬದಲಾಗಿವೆ.
ಇಲ್ಲಿನ ನಾಲ್ಕು ಉದ್ಯಾನಗಳನ್ನು ಸಣ್ಣ ನೀರಾವರಿ ಇಲಾಖೆಯ 3 ಕೋಟಿ ರೂ. ಅನುದಾನದಲ್ಲಿ 2022ರಲ್ಲಿ ನಿರ್ಮಾಣ ಮಾಡಿ ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರಿಂದ ಲೋಕಾರ್ಪಣೆಗೊಳಿಸಲಾಗಿತ್ತು. ಬಿಡುವಿನ ವೇಳೆಯಲ್ಲಿ ಗ್ರಾಮದ ಜನರು ಬೆಳಗ್ಗೆ ಮತ್ತು ಸಂಜೆ ವಾಯುವಿಹಾರ ನಡೆಸಲು ಅನುಕೂಲವಾಗಿತ್ತು. ಅಲ್ಲದೇ, ಉದ್ಯಾನದಲ್ಲಿ ಮಕ್ಕಳು ಆಟವಾಡಲು ಅನುಕೂಲವಾಗುವಂತೆ ಉಯ್ಯಲೆ, ಜಾರುಬಂಡೆ ಇನ್ನಿತರ ಆಟಿಕೆಗಳನ್ನು ಅಳವಡಿಸಿದ್ದರಿಂದ ಪಾಲಕರು ಮಕ್ಕಳನ್ನು ಕರೆತಂದು ಆಟವಾಡಿಸುತ್ತಿದ್ದರು. ಪ್ರಾರಂಭದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ, ಈಗ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net