ಗ್ರಾಮದ ಮುಖಂಡ ಪಿ.ಡಿ.ಕುಮಾರ್ ಮಾತನಾಡಿ, ರೈತರ ಕೃಷಿ ಮತ್ತು ಜಾನುವಾರುಗಳ ಅನೂಕೂಲಕ್ಕಾಗಿ ನೀರು ಒದಗಿಸುವ ವಿರಿಜಾ ನಾಲೆಯು ತಾಲೂಕಿನ ಬೆಳಗೊಳದಿಂದ ಪ್ರಾರಂಭವಾಗಿ ಕಾರೆಕುರ, ಪಾಲಹಳ್ಳಿ, ಬೊಮ್ಮೂರು ಅಗ್ರಹಾರ, ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ ಸೇರಿದಂತೆ ಸಾಕಷ್ಟು ಕಡೆ ಹರಿದು ಕಾವೇರಿ ನದಿ ಸೇರುತ್ತದೆ. ಆದರೆ ಇದೆ ಬೆಳಗೊಳದ ಸಮೀಪ ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ರಾಸಾಯನಿಕ ನೀರು ಈ ವಿರಿಜಾ ನಾಲೆಗೆ ಸೇರಿ ವಿಷಯುಕ್ತವಾಗುತ್ತಿದೆ.