ದೇಗುಲ ತಡೆಗೋಡೆ ತೆರವಿಗೆ ಆಕ್ರೋಶ

ಗ್ರಾಪಂ ಎದುರು ಆನೆಗೊಳ ಗ್ರಾಮಸ್ಥರ ಪ್ರತಿಭಟನೆ
ಆನೆಗೊಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಆನೆಗೊಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on: 

ಕಿಕ್ಕೇರಿ: ಹೋಬಳಿಯ ಆನೆಗೊಳ ಗ್ರಾಮದ ಲಕ್ಷ್ಮೀದೇವಿ (ಆನೆಗೊಳಮ್ಮ) ದೇವಸ್ಥಾನದ ಸುತ್ತ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಏಕಾಏಕಿ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ಮಾತನಾಡಿ, ಸಾರ್ವಜನಿಕರ ಸಹಕಾರ ಹಾಗೂ ದೇಣಿಗೆಯಿಂದ ಲಕ್ಷ್ಮೀದೇವಿ ದೇವಸ್ಥಾನ ನಿರ್ಮಿಸಲಾಗಿದ್ದು, ದೇವಸ್ಥಾನದ ಸುತ್ತಲೂ ಭದ್ರತೆ ಹಾಗೂ ಸ್ವಚ್ಛತೆ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದರೆ ಯಾವುದೇ ಮುನ್ನೆಚ್ಚರಿಕೆ ಅಥವಾ ಗ್ರಾಮಸ್ಥರಿಗೆ ಸೂಕ್ತ ಮಾಹಿತಿ ನೀಡದೆ ದೇವಸ್ಥಾನದ ಕಾಂಪೌಂಡ್ ತೆರವು ಮಾಡಿರುವುದು ಯಾರು, ಕಾರಣ ಏನು ತಿಳಿಯದಾಗಿದೆ.

ದೇವಸ್ಥಾನದ ಆವರಣದ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಯನ್ನು ಪುನರ್‌ನಿರ್ಮಿಸಬೇಕು ಹಾಗೂ ತೆರವುಗೊಳಿಸಿರುವ ಕುರಿತು ಸೂಕ್ತ ಕಾರಣವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪಿಡಿಒ ರವಿಕುಮಾರ್ ಮಾತನಾಡಿ, ನನ್ನ ಅವಧಿಯಲ್ಲಿ ಕಾಂಪೌಂಡ್ ನಿರ್ಮಿಸಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ವಿವಾದವಿದ್ದು ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು ಎಂದರು.

ಮುಖಂಡರಾದ ಗಣೇಶ್, ಹರೀಶ್, ಪ್ರದೀಪ್, ನಾಗೇಶ್, ಸುರೇಶ್, ಸತೀಶ್, ದೀಲೀಪ್, ಸುನೀಲ್, ಕೌಷಿಕ್, ಸಚ್ಚಿ, ರಾಜಪ್ಪ, ನಾಗೇಂದ್ರ, ರಾಜಣ್ಣ, ಶಾಂತಣ್ಣ, ಪ್ರಸನ್ನ, ನಾಗರಾಜಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net