ಒಗ್ಗಟ್ಟಿನಿಂದ ಸಂಸ್ಥೆ ಬೆಳವಣಿಗೆ ಸಾಧ್ಯ

ನಿವೃತ್ತ ಪ್ರಾಂಶುಪಾಲರಾದ ಆಲಂಗೂರ್ ಮಂಜುನಾಥ ಮತ್ತು ಪತ್ನಿ ವಸಂತಾ ಅವರನ್ನು  ಸನ್ಮಾನಿಸಲಾಯಿತು. ಡಾ. ಕೃಷ್ಣೇಗೌಡ, ಡಾ. ಎನ್.ಎಸ್. ಶಂಕರೇಗೌಡ, ಡಾ.ಶ್ರೀನಿವಾಸ್, ಡಾ.ಸೀಮಾ ಕೌಸರ್ ಇತರರು ಇದ್ದರು.
ನಿವೃತ್ತ ಪ್ರಾಂಶುಪಾಲರಾದ ಆಲಂಗೂರ್ ಮಂಜುನಾಥ ಮತ್ತು ಪತ್ನಿ ವಸಂತಾ ಅವರನ್ನು ಸನ್ಮಾನಿಸಲಾಯಿತು. ಡಾ. ಕೃಷ್ಣೇಗೌಡ, ಡಾ. ಎನ್.ಎಸ್. ಶಂಕರೇಗೌಡ, ಡಾ.ಶ್ರೀನಿವಾಸ್, ಡಾ.ಸೀಮಾ ಕೌಸರ್ ಇತರರು ಇದ್ದರು.
Published on
ಹಲಗೂರು: ಒಂದು ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಒಗ್ಗಟ್ಟಾಗಿರಬೇಕು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದರೆ ಮಾತ್ರ ಸಂಸ್ಥೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಆಲಂಗೂರು ಮಂಜುನಾಥ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಕರ್ತವ್ಯದ ಅವಧಿಯಲ್ಲಿ ಎಲ್ಲರೂ ಪೂರ್ಣ ಸಹಕಾರ ನೀಡಿದ್ದೀರಿ. ಹೊಸದಾಗಿ ಬಂದಿರುವ ಕೃಷ್ಣೇಗೌಡರಿಗೂ ಅದೇ ಸಹಕಾರ ನೀಡಿ. ಜೇನಿನ ಗೂಡಿನಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರಾದ ಸೀಮಾ ಕೌಸರ್ ಮಾತನಾಡಿದರು. ಡಾ. ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಎನ್.ಎಸ್. ಶಂಕರೇಗೌಡ, ಡಾ.ಶ್ರೀನಿವಾಸ್, ಡಾ.ಸೀಮಾ ಕೌಸರ್,
ತಾರಾ ಜಯಲಕ್ಷ್ಮೀ, ಗುರುಪ್ರಸಾದ್, ಸುಧಾ ಬಿದರಿ, ಬಿ.ಸಿ.ರವಿ, ಕುಮಾರ ಸ್ವಾಮಿ, ಆನಂದ್ ನೀಲಿ, ಅತಿಥಿ ಉಪನ್ಯಾಸಕರಾದ ಎಂ.ಎಚ್. ಮೂರ್ತಿ, ಭವ್ಯಾ, ಮಧುಕುಮಾರ್, ಪ್ರಶಾಂತ್ ರಂಜನ್, ಚೇತಾನಾ, ರವಿ ಇತರರು ಇದ್ದರು. ಇದೇ ವೇಳೆ ಅಲಂಗೂರ್ ಮಂಜುನಾಥ್ ಮತ್ತು ಪತ್ನಿ ವಸಂತಾ ಅವರನ್ನು ಅಭಿನಂದಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net