ಘನ ತ್ಯಾಜ್ಯಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಆರ್ಥಿಕತೆ ಅಷ್ಟೇ ಅಲ್ಲದೇ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಮನುಷ್ಯ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ಸ್ಥಳೀಯ ಸಂಸ್ಥೆಗಳು ಘನ ತ್ಯಾಜ್ಯಗಳನ್ನು ನಾಲ್ಕು ವಿಧದ ತ್ಯಾಜ್ಯಗಳಾದ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ತ್ಯಾಜ್ಯಗಳ (ಬಲ್ಬ್ಗಳು, ಬ್ಯಾಟರಿ, ಅವಧಿ ಮೀರಿದ ಔಷಧ, ಬಣ್ಣದ ಡಬ್ಬಿಗಳು ಇತ್ಯಾದಿ) ವಿಂಗಡಣೆಯನ್ನು ಮಾಡಿ ಸಂಗ್ರಹಿಸಿ ಅವುಗಳನ್ನು ಸಾಗಾಣಿಕೆ ಮಾಡಬೇಕು. ನಂತರ ಸಂಸ್ಕರಣೆ ಹಾಗೂ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಸಲಹೆ ನೀಡಿದರು.