ಶುದ್ಧ ಗಾಳಿಗಾಗಿ ಮರಗಿಡಗಳನ್ನು ಪೋಷಿಸಿ

 ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಈಚೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಹೇಶ್, ತಿಮ್ಮಶೆಟ್ಟಿ, ವೆಂಕಟೇಶ್, ಮುರುಳಿ, ಪ್ರೀತಂ, ರವಿ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಈಚೆಗೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಹೇಶ್, ತಿಮ್ಮಶೆಟ್ಟಿ, ವೆಂಕಟೇಶ್, ಮುರುಳಿ, ಪ್ರೀತಂ, ರವಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಜೇನುಗೂಡು ಮಹೇಶ್ ಅಭಿಪ್ರಾಯ
  • ವೃಕ್ಷ ದೇವತೆ ಸಾಲುಮರದ ತಿಮ್ಮಕ್ಕನ ಸ್ಮರಣೆ
ಕಿಕ್ಕೇರಿ: ಅನಕ್ಷರಸ್ಥರಾದರೂ ಮಕ್ಕಳಿಲ್ಲದ ತಿಮ್ಮಕ್ಕ ಸಾಲು ಮರಗಳನ್ನು ನೆಟ್ಟು ಬೆಳೆಸಿ ಉಳಿಸಿ ನಾಡಿಗೆ ವೃಕ್ಷದೇವತೆಯಾದರು ಎಂದು ಸಾಹಿತಿ ಜೇನುಗೂಡು ಮಹೇಶ್ ತಿಳಿಸಿದರು.
ಹೋಬಳಿಯ ಊಗಿನಹಳ್ಳಿಯಲ್ಲಿ ಇತ್ತೀಚೆಗೆ ಕುರುಹಿನಶೆಟ್ಟಿ ಸಮಾಜದಿಂದ ಹಮ್ಮಿಕೊಂಡಿದ್ದ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಮರಗಿಡಗಳಿಲ್ಲದೆ ಶುದ್ಧ ಆಮ್ಲಜನಕ ಇಲ್ಲದೆ ಸಾಯುವ, ನೂರಾರು ಕಾಯಿಲೆ ಪ್ರಕರಣ ದೆಹಲಿ ಸೇರಿದಂತೆ ಎಲ್ಲೆಡೆ ಕಾಣಬಹುದಾಗಿದೆ. ಮರಗಿಡ ಉಳಿಸಿದರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ ಎಂದರು.
ಕೆಇಬಿ ತಿಮ್ಮಶೆಟ್ಟಿ ಮಾತನಾಡಿ, ಹಸಿರೇ ಉಸಿರಾಗಬೇಕಿದೆ. ಅಕ್ಷರ ಜ್ಞಾನವಿಲ್ಲದ ತಿಮ್ಮಕ್ಕ ಸಮಾಜಕ್ಕಾಗಿ ಗಿಡಮರ ಬಿಟ್ಟು ಹೋಗಿದ್ದಾರೆ. ಇವರಂತೆ ಮುಂದಿನ ಪೀಳಿಗೆ ಮರಗಿಡ ಬೆಳಸಬೇಕಿದೆ. ಒಂದು ಮರ ಕಡಿದರೆ ಹತ್ತು ಮರ ಬೆಳೆಸುವ ಸಂಕಲ್ಪ ತೊಡಬೇಕು ಎಂದು ನುಡಿದರು.
ಪರಿಸರಪ್ರೇಮಿ ವೆಂಕಟೇಶ್ ಮಾತನಾಡಿ, ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಸ್ವಯಂ ಇಚ್ಛೆಯಿಂದ ಮೂಡಿಸುತ್ತಿದ್ದು, ಜತೆಗೆ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದು, ಇದರಲ್ಲಿ ತನಗೆ ಖುಷಿ ಇದೆ ಎಂದರು.
ವಿವಿಧ ಗಿಡಗಳನ್ನು ವಿತರಿಸಿ ಮರ ಬೆಳೆಸಲು ಪ್ರತಿಜ್ಞೆ ಮಾಡಲಾಯಿತು. ಮುರುಳಿ, ನ್ಯಾಯಬೆಲೆ ತಿಮ್ಮಶೆಟ್ಟಿ, ಜಯರಾಂ, ಪ್ರೀತಂ, ರವಿ, ಭಾರತಿ, ಕಮಲಮ್ಮ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net