ಮೇಲುಕೋಟೆಯ ಸರ್ಕಾರಿ ಪ್ರಥಮದರ್ಜೆಕಾಲೇಜಿನ ವತಿಯಿಂದ ಹೊಸಕೋಟೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಸಂದರ್ಭ ಶಾಸಕ ದರ್ಶನ್‌ಪುಟ್ಟಣ್ಣಯ್ಯ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಂಜುಂಡಯ್ಯ, ಅಧ್ಯಾಪಕರಾದ ಡಾ. ಭವಾನಿ, ಡಾ.ಸುಮಾ, ಸಂತೋಷ್, ಅರುಣ್ ಕುಮಾರ್, ರೇಖಾವತಿ ಇತರರು ಹಾಜರಿದ್ದರು.
ಮೇಲುಕೋಟೆ : ವಿದ್ಯಾರ್ಥಿಗಳು ಗ್ರಾಮೀಣಭಾಗದ ಸಮಸ್ಯೆಗಳನ್ನು ಅರಿತುಕೊಂಡು
ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು ಎಂದು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಸಲಹೆ ನೀಡಿದರು.
ಅವರು ಮೇಲುಕೋಟೆಯ ಸರ್ಕಾರಿ ಪ್ರಥಮದರ್ಜೆಕಾಲೇಜಿನ ವತಿಯಿಂದ ಹೋಬಳಿಯ ಹೊಸಕೋಟೆ ಗ್ರಾಮದಲ್ಲಿಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾಯೋಜನೆ (ಎನ್ನೆಸ್ಸೆಸ್) ವಾರ್ಷಿಕ ವಿಶೇಷ ಶಿಬಿರದ ಚಟುವಟಿಕೆಗಳನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು.
ಯುವಜನರಿಗೆ ಹಳ್ಳಿಗಾಡಿನ ಬದುಕು ಅರ್ಥವಾಗಬೇಕು. ಯುವಜನರಲ್ಲಿ ವ್ಯಕ್ತಿತ್ವ ವಿಕಸನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ವಿದ್ಯಾರ್ಥಿಗಳು ಆತ್ಮ ಪೂರ್ವಕವಾಗಿ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ವಚ್ಛತೆ, ಸೇವೆ ಹಾಗೂ ಆರ್ಥಿಕ ಸ್ವಾವಲಂಬನೆಗಳನ್ನು ಅರಿಯಬೇಕು ಎಂದರು.
ಯುವ ಜನರು ಗ್ರಾಮೀಣರಲ್ಲಿ ಸಮಾಜಮುಖಿ ಚಿಂತನೆ, ಅರಿವು ಮೂಡಿಸಬೇಕು. ಹಾಗಾದಾಗಲೇ ಶಿಬಿರ ಸಾರ್ಥಕಗೊಳ್ಳಲಿದೆ ಎಂದರು.
ಮಂಡ್ಯ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಚ್.ಪಿ ತಮ್ಮೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಸೇವಾಯೋಜನೆ ಶಿಬಿರವು ವಿದ್ಯಾರ್ಥಿಗಳಲ್ಲಿ ಜೀವನಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಗ್ರಾಮದ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಜೊತೆಗೆ ಶಿಬಿರಗಳು ಯುವಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಶಿಸ್ತುಬದ್ಧವಾದ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಶ್ರಮದಾನದ ಸೇವೆಗಳ ಮೂಲಕ ಹಳ್ಳಿಗಳ ಚಿತ್ರಣವನ್ನು ಬದಲಾಯಿಸಲು ಸಾಧ್ಯವಿದೆ ಹೀಗಾಗಿ ಪ್ರತಿವಿದ್ಯಾರ್ಥಿಯೂ ಸಮಾಜಮುಖಿಯಾಗಿ ಚಿಂತಿಸಬೇಕು ಎಂದರು.
ಗ್ರಾಮದ ಯಜಮಾನರಾದ ಸಿಂಗ್ರೀಗೌಡ, ಗಿರೀಶ್ ಬಾಬು, ಹಾಲು ಉತ್ಪಾದಕ
ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಂಜುಂಡಯ್ಯ, ಅಧ್ಯಾಪಕರಾದ ಡಾ. ಭವಾನಿ, ಡಾ.ಸುಮಾ, ಸಂತೋಷ್, ಅರುಣ್ ಕುಮಾರ್, ರೇಖಾವತಿ ಇತರರು ಹಾಜರಿದ್ದರು.