ನಾಲೆಗಳ ಆಧುನಿಕರಣಕ್ಕೆ ಅಗತ್ಯ ಕ್ರಮ

ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಸುಧಾಕರ್, ಧನಂಜಯ, ಮೂರ್ತಿ, ಪ್ರಸನ್ನಕುಮಾರ್, ಶೋಭಾ, ತಿಮ್ಮೇಗೌಡ ಇದ್ದರು.
ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಸುಧಾಕರ್, ಧನಂಜಯ, ಮೂರ್ತಿ, ಪ್ರಸನ್ನಕುಮಾರ್, ಶೋಭಾ, ತಿಮ್ಮೇಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಸೂಚನೆ
ಮದ್ದೂರು: ಕ್ಷೇತ್ರದಲ್ಲಿ ರೈತರು ಬೆಳೆ ಬೆಳೆಯಲು ನೀರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಕೋಟ್ಯಂತರ ರೂ.ವೆಚ್ಚದಲ್ಲಿ ನಾಲೆಗಳ ಆಧುನಿಕರಣ ಮಾಡಿ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಪಣ್ಣೆದೊಡ್ಡಿ, ಕೆರೆಮೇಗಳದೊಡ್ಡಿ, ಬೆಳತೂರು, ಹೊಂಬಾಳೆಗೌಡನದೊಡ್ಡಿ, ಮಹರ್ನವಮಿದೊಡ್ಡಿ ಗ್ರಾಮಗಳಲ್ಲಿ ಶನಿವಾರ 1.80 ಕೋಟಿ ರೂ., ವೆಚ್ಚದ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಕೊನೆ ಭಾಗಕ್ಕೆ ಕೆಆರ್‌ಎಸ್ ಜಲಾಶಯದಿಂದ ನೀರು ಬರಲು ಈ ಹಿಂದೆ ಒಂದು ವಾರ ಆಗುತ್ತಿತ್ತು. ಆದರೆ, ಈಗ ನಾಲೆಗಳ ಆಧುನಿಕರಣವಾಗಿರುವುದರಿಂದ ಎರಡು ದಿನಗಳಲ್ಲಿ ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿದು ರೈತರಿಗೆ ಅನುಕೂಲವಾಗುತ್ತಿದೆ ಎಂದರು.
ರೈತರು ಬೇಸಾಯ ಮಾಡಲು ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚಿಸಿ ನೀರಾವರಿ ಯೋಜನೆಗಳಿಗೆ ಅಂದಾಜು 800 ಕೋಟಿಗೂ ರೂ., ಹೆಚ್ಚಿನ ಅನುದಾನ ತಂದು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕೆಮ್ಮಣ್ಣುನಾಲೆ ಆಧುನಿಕರಣ ಕಾಮಗಾರಿ 100 ಕೋಟಿ ರೂ., ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಬೈರನ್, ವೈದ್ಯನಾಥಪುರ ಹಾಗೂ ಚಾಮನಹಳ್ಳಿ ನಾಲೆಗಳ ಆಧುನಿಕರಣಕ್ಕೆ ಶೀಘ್ರವಾಗಿ ಚಾಲನೆ ನೀಡಲಾಗುವುದು ಎಂದರು.
ನಾನು ಶಾಸಕನಾದ ಎರಡುವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ವಿಶೇಷ ಅನುದಾನ ನೀಡಿ ರಸ್ತೆ, ಚರಂಡಿ, ಕುಡಿಯುವ ನೀರು, ಕೆರೆ,ಕಟ್ಟೆಗಳ ಅಬಿವೃದ್ಧಿ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದೆಯೂ ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು ಎಂದರು.
ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಗ್ರಾಪಂ ಸದಸ್ಯರಾದ ಪ್ರಸನ್ನಕುಮಾರ್, ಮೂರ್ತಿ, ಶೋಭಾ, ಮುಖಂಡರಾದ ಧನಂಜಯ, ಸುಧಾಕರ್, ತಿಮ್ಮೇಗೌಡ, ಪುಟ್ಟಸ್ವಾಮಿ, ಗೋವಿಂದ, ಸಿ.ಕೆ.ವೆಂಕಟೇಶ್, ಪ್ರಕಾಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net