ಪಟ್ಟಣದ ಟ್ಯಾಂಕ್ ಮೈದಾನದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಯಾವ ವಿದ್ಯಾರ್ಥಿ ತನ್ನ ಗುರಿಯನ್ನು ಸಾಧಿಸಲೇಬೇಕೆಂಬ ಹಸಿವಿನಲ್ಲಿರುತ್ತಾನೆ ಅಂತಹ ವಿದ್ಯಾರ್ಥಿಗೆ ಯಾವ ತರಬೇತಿಯ ಅಗತ್ಯವಿರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ, ನಾನು ಬಡವ, ಇಂಗ್ಲಿಷ್ ಜ್ಞಾನ ನಗರ ಪ್ರದೇಶದವರಷ್ಟು ಇಲ್ಲ ಎಂಬಿತ್ಯಾದಿ ಹಿಂಜರಿಕೆ ಮನೋಭಾವ ಯಾರಿಗೂ ಬೇಡ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಐಎಎಸ್, ಕೆಎಎಸ್ ಮಾಡಿ ಉನ್ನತ ಹುದ್ದೆಯಲ್ಲಿರುವ ಅನೇಕ ನಿದರ್ಶನಗಳಿವೆ ಎಂದು ಹೇಳಿದರು.