ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಭಾನುವಾರ ತಾಲೂಕು ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಎಂ.ಬಿ.ಇಂದ್ರಕುಮಾರ್, ಎಸ್.ಎಲ್.ಲಿಂಗರಾಜು, ಎಂ.ಬಿ.ಸುರೇಶ್, ಎಚ್.ಎಂ.ಟಿ.ದೇವರಾಜು, ಟಿ.ಎಂ.ಹೊಸೂರು ಮಹದೇವು ಇತರರು ಇದ್ದರು.
ಶ್ರೀರಂಗಪಟ್ಟಣ :ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸುಧಾರಣೆಗಳ ಸಾಕಾರಮೂರ್ತಿ ಹಾಗೂ ಸಾಕಷ್ಟು ಕೆರೆಗಳ ನಿರ್ಮಾಣಗಳೊಂದಿಗೆ ಜಲಕ್ರಾಂತಿಯ ಹರಿಕಾರನಾದ ನಾಡಪ್ರಭು ಕೆಂಪೇಗೌಡ ಅವರನ್ನು ಸರ್ವರೂ ಸದಾಕಾಲ ಸ್ಮರಿಸಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಎಂ.ಬಿ.ಇಂದ್ರಕುಮಾರ್ ಹೇಳಿದರು.
ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಸಂಘದ ಸದಸ್ಯರು ಹಾಗೂ ಎಂ.ಶೆಟ್ಟಹಳ್ಳಿ, ಕೆ.ಶೆಟ್ಟಹಳ್ಳಿ ಟಿ.ಎಂ.ಹೊಸೂರು, ಸಬ್ಬನಕುಪ್ಪೆ, ಗೌಡಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಅತ್ಯಾಧುನಿಕ ಯಂತ್ರಗಳಿಲ್ಲದ ಕಾಲದಲ್ಲೇ ಜನರು ಮತ್ತು ಕೃಷಿಗೆ ನೀರು ಪೂರೈಸಲು ಕೆಂಪೇಗೌಡರು ಬೆಂಗಳೂರು ಸೇರಿದಂತೆ ಸುತ್ತಮುತ್ತ ಸಾಕಷ್ಟು ಕೆರೆಗಳನ್ನು ನಿರ್ಮಿಸಿದ್ದಾರೆ. ಜಲಕ್ರಾಂತಿ ಮೂಲಕ ನೀರುದೊಗಿಸಿ ಜನ-ಜಾನುವಾರುಗಳ ದಾಹ ತಣಿಸಿ ಭೂಮಿಯ ಹಸಿರೀಕರಣಗೊಳಿಸಿದರು. ರೈತಾಪಿ ಜನರು ನಮ್ಮ ಸುತ್ತಮುತ್ತಲಿರುವ ಕೆರೆ-ಕಟ್ಟೆಗಳ ರಕ್ಷಣೆ ಜತೆಗೆ ಫಲವತ್ತದ ಕೃಷಿಭೂಮಿಗಳನ್ನು ಉಳಿಸಿಕೊಂಡು ಕೃಷಿಕ ಜೀವನ ದೂರವಾಗದೆ ಅನ್ನದಾತರಾಗಿಯೇ ಮುಂದುವರೆಯೋಣ ಎಂದರು.
ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು, ಎಂ.ಬಿ.ಸುರೇಶ್, ಎಚ್.ಎಂ.ಟಿ.ದೇವರಾಜು, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಟಿ.ಎಂ.ಹೊಸೂರು ಮಹದೇವು, ಎಂ.ಕೆ.ವಿಶ್ವನಾಥ್, ಗೌಡಹಳ್ಳಿ ದೇವರಾಜು, ಎಂ.ಶೆಟ್ಟಹಳ್ಳಿ ಗ್ರಾಮದ ಸುರೇಂದ್ರ, ಅರುಣ್, ನವೀನ್ ಕುಮಾರ್, ಸ್ವಾಮಿಗೌಡ ಇದ್ದರು.