ಮದ್ದೂರು ತಾಲೂಕಿನ ಸೋಮನಹಳ್ಳಿಯ ಕೃಷಿ ಸ್ವಾವಲಂಬಿ ಕಚೇರಿಯಲ್ಲಿ ಕೃಷಿಕ ಸ್ವಾವಲಂಬಿ ಸಂಘ ಕೃಷಿಕರಿಗೆ ಆಯೋಜಿಸಿದ್ದ ಅಣಬೆ ಬೇಸಾಯ ಮತ್ತು ತಾಂತ್ರಿಕತೆ ಕುರಿತ ತರಬೇತಿಯಲ್ಲಿ ಕೃಷಿಕ ಸ್ವಾವಲಂಬಿ ಸಂಘದ ಪ್ರಧಾನ ಕಾರ್ಯದರ್ಶಿ ನ.ಲಿ.ಕೃಷ್ಣ ಮಾತನಾಡಿದರು. ಪ್ರಸನ್ನ, ಸಿ.ಪುಟ್ಟಸ್ವಾಮಿ, ರವೀಂದ್ರ, ಬಸವರಾಜ್, ರಾಮಲಿಂಗೇಗೌಡ, ಉಮೇಶ್ ಇದ್ದರು.
ಮದ್ದೂರು: ಪೌಷ್ಟಿಕ ಆಹಾರವಾದ ಅಣಬೆ ಆರೋಗ್ಯ ವೃದ್ಧಿಗೆ ಪೂರಕವಾಗಿದ್ದು, ಎಲ್ಲ ವಯಸ್ಸಿನವರು ಬಳಸಬಹುದು ಎಂದು ಸಂಪನ್ಮೂಲ ವ್ಯಕ್ತಿ ಎಸ್.ಪ್ರಸನ್ನ ಕುಮಾರ್ ತಿಳಿಸಿದರು.
ತಾಲೂಕಿನ ಸೋಮನಹಳ್ಳಿಯ ಕೃಷಿ ಸ್ವಾವಲಂಬಿ ಕಚೇರಿಯಲ್ಲಿ ಗುರುವಾರ ಕೃಷಿಕ ಸ್ವಾವಲಂಬಿ ಸಂಘ ಕೃಷಿಕರಿಗೆ ಆಯೋಜಿಸಿದ್ದ ಅಣಬೆ ಬೇಸಾಯ ಮತ್ತು ತಾಂತ್ರಿಕತೆ ಕುರಿತ ತರಬೇತಿಯಲ್ಲಿ ಮಾತನಾಡಿದರು.
ಅಣಬೆಯಲ್ಲಿ 2000 ತಳಿಗಳಿದ್ದು ಅದರಲ್ಲಿ ಮೂರು ವಿಧದ ಅಣಬೆಗಳನ್ನು ವಿಂಗಡಿಸಿದ್ದು ಖಾದ್ಯ ಅಣಬೆ, ವಿಷ ಪೂರಿತ ಅಣಬೆ ಹಾಗೂ ಔಷಧ ಅಣಬೆ ಇವೆ. ಖಾದ್ಯ ಅಣಬೆಯಲ್ಲಿ ಚಿಪ್ಪು ಅಣಬೆ, ಗುಂಡಿ ಅಣಬೆ ಹಾಗೂ ಹಾಲು ಅಣಬೆ ಪ್ರಮುಖವಾಗಿದೆ. ಚಿಪ್ಪು ಅಣಬೆ ಹಳೇ ಮೈಸೂರು ಭಾಗದಲ್ಲಿ ಬೆಳೆಯಲು ಸೂಕ್ತವಾಗಿದೆ ಎಂದು ಮಾಹಿತಿ ನೀಡಿದರು
ಕೃಷಿಕ ಸ್ವಾವಲಂಬಿ ಸಂಘದ ಅಧ್ಯಕ್ಷ ಸಿ.ಪುಟ್ಟಸ್ವಾಮಿ ಮಾತನಾಡಿ, ಕೃಷಿಕರಲ್ಲಿ ಸ್ವಾವಲಂಬನೆ ಮೂಡಿಸಲು ಕೃಷಿ ಜತೆಗೆ ಉಪ ಕಸುಬುಗಳನ್ನು ಮಾಡುವಲ್ಲಿ ಬೇಕಾದ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಅಗತ್ಯ ತರಬೇತಿ ನೀಡುವಲ್ಲಿ ಮುಂದಾಗಿದೆ ಎಂದರು.
ಕೃಷಿಕ ಸ್ವಾವಲಂಬಿ ಸಂಘದ ಪ್ರಧಾನ ಕಾರ್ಯದರ್ಶಿ ನ.ಲಿ.ಕೃಷ್ಣ, ಕೃಷಿಕ ಸ್ವಾವಲಂಬಿ ಸಂಘದ ನಿರ್ದೆಶಕರಾದ ರವೀಂದ್ರ, ಬಸವರಾಜ್, ರೈತ ಮುಖಂಡರಾದ ರಾಮಲಿಂಗೇಗೌಡ, ಕೊತ್ತನಹಳ್ಳಿ ಉಮೇಶ್ ಇತರರಿದ್ದರು.