ಮಂಟೇಸ್ವಾಮಿಯ ನಾಲ್ಕನೇ ಪಂಕ್ತಿ ಸೇವೆ

ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಮಂಟೇಸ್ವಾಮಿ ಮಂಟಕ್ಕೆ ಪಂಕ್ತಿ ಸೇವೆಪೂಜೆಗಾಗಿ ಆಗಮಿರುವ ಭಕ್ತರು ಗದ್ದುಗೆ ದರ್ಶನ ಪಡೆದರು.
ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಮಂಟೇಸ್ವಾಮಿ ಮಂಟಕ್ಕೆ ಪಂಕ್ತಿ ಸೇವೆಪೂಜೆಗಾಗಿ ಆಗಮಿರುವ ಭಕ್ತರು ಗದ್ದುಗೆ ದರ್ಶನ ಪಡೆದರು.
Published on
ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದ ಮಂಟೇಸ್ವಾಮಿ ಮಠದಲ್ಲಿ ಸೋಮವಾರ ನಾಲ್ಕನೇ ಪಂಕ್ತಿ ಸೇವೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಧರೆಗೆ ದೊಡ್ಡವರ ಮಂಟೇಸ್ವಾಮಿ ಶ್ರೀ ಮಠದ ವತಿಯಿಂದ ಪಾರಂಪರಿಕವಾಗಿ ಐದು ಪಂಕ್ತಿ ಸೇವೆ ಪದ್ಧತಿಗಳು ನಡೆಯಲಿದ್ದು, ಕಳೆದ ಮಾ.20ರಂದು ಮೊದಲನೇ ಪಂಕ್ತಿ ಹಾಗೂ ಮಾ.23 ರಂದು ಎರಡನೇ ಹಾಗೂ ಮಾ.27 ರಂದು ಮೂರನೇ ಸೇವೆ ಸಾಂಗವಾಗಿ ನೆರವೇರಿದ್ದು, ಸೋಮವಾರ ನಾಲ್ಕನೆ ಪಂಕ್ತಿ ಸೇವೆಯ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಸ್ವಾಮಿಗೆ ಹರಕೆ ಹೊತ್ತ ಭಕ್ತರು ಶ್ರೀ ಮಠಕ್ಕೆ ಆಗಮಿಸಿದ್ದರು.
ಕಜ್ಜಾಯ-ತುಪ್ಪ ಹಾಗೂ ಸಕ್ಕರೆ-ಬಾಳೆ ಹಣ್ಣು ಪೂಜಾ ತಟ್ಟೆಯಲ್ಲಿರಿಸಿ ಧರೆಗೆ ದೊಡ್ಡವರ ಗದ್ದುಗೆಗೆ ನೈವೈದ್ಯ ಸಮರ್ಪಣಾ ಪೂಜೆ ಸಲ್ಲಿಸಿ ದರ್ಶನ ಪಡೆದರು. ಶ್ರೀ ಮಠದ ಪೀಠಾಧಿಕಾರಿ ಶ್ರೀ ಜ್ಞಾನನಂದ ಚನ್ನರಾಜೇಅರಸು ಅವರು ಪಂಕ್ತಿ ಸೇವೆಗೆ ಸಿದ್ದಪಡಿಸಿದ್ದ ಅನ್ನದ ರಾಶಿಗೆ ಪೂಜೆ ನೆರವೇರಿಸಿ ಭಕ್ತ ಸಮೂಹದ ಪಂಕ್ತಿಗೆ ಉಣ ಬಡಿಸಲು ಚಾಲನೆ ನೀಡಿದರು. ನೆರೆದ ಭಕ್ತಗಣ ಅನ್ನವನ್ನು ಕಣ್ಣಿಗೆ ಒತ್ತಿ ಭಕ್ತಿಯಿಂದ ನಮಿಸಿ ಸೇವನೆ ಮಾಡಿದರು. ಪೀಠಾಧಿಕಾರಿ ಪುತ್ರ ಹಿತೇಶ್ ಸಿದ್ದಲಿಂಗರಾಜೇಅರಸು ಅವರು ಸೇವೆಗೆ ಆಗಮಿಸಿದ ಭಕ್ತರಿಗೆ ಅನುಕೂಲಕರವಾದ ಸಿದ್ದತೆಗಳನ್ನು ನೋಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net