ಮಾದರಿಯಾದ ಪಾಂಡವಪುರ ಎಸಿ ಕೆ.ಆರ್.ಶ್ರೀನಿವಾಸ್

 ಸಾದ್ಗೋನಹಳ್ಳಿ ಬಳಿಯಿರುವ ಮಾತೃಭೂಮಿ ಉಚಿತ ವೃದ್ಧಾಶ್ರಮದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ವೃದ್ಧರೊಬ್ಬರಿಗೆ ಶೇವಿಂಗ್ ಮಾಡುತ್ತಿರುವುದು.
ಸಾದ್ಗೋನಹಳ್ಳಿ ಬಳಿಯಿರುವ ಮಾತೃಭೂಮಿ ಉಚಿತ ವೃದ್ಧಾಶ್ರಮದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ವೃದ್ಧರೊಬ್ಬರಿಗೆ ಶೇವಿಂಗ್ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವೃದ್ಧರೊಬ್ಬರಿಗೆ ಶೇವಿಂಗ್, ಕೇಶಮುಂಡನ ಮಾಡಿದ ಅಧಿಕಾರಿ
ಕೆ.ಆರ್.ಪೇಟೆ: ಪಟ್ಟಣದ ಹೊರವಲಯದ ಸಾದ್ಗೋನಹಳ್ಳಿ ಬಳಿಯಿರುವ ಮಾತೃಭೂಮಿ ಉಚಿತ ವೃದ್ಧಾಶ್ರಮಕ್ಕೆ ಪಾಂಡವಪುರ ಉಪ ವಿಭಾಗಾಧಿ ಕಾರಿ ಕೆ.ಆರ್.ಶ್ರೀನಿವಾಸ್ ದಂಪತಿ ಭೇಟಿ ನೀಡಿ ಹಿರಿಯರೊಂದಿಗೆ ಸಂಭ್ರಮಿಸುವುದರ ಜತೆಗೆ ಯೋಗ ಕ್ಷೇಮ ವಿಚಾರಿಸಿ ಸಹಪಂಕ್ತಿಯಲ್ಲಿ ಭೋಜನ ಸ್ವೀಕರಿಸಿದರು.
ಸಂಧ್ಯಾ ಕಾಲದಲ್ಲಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ವಯೋವೃದ್ಧರ ಕುಶಲೋಪರಿ ವಿಚಾರಿಸಿದ ಶ್ರೀನಿವಾಸ್, ತಮ್ಮ ಪತ್ನಿ ತಯಾರಿಸಿ ತಂದಿದ್ದ ಮೊಸರನ್ನ, ಟೊಮ್ಯಾಟೊ ಬಾತ್ ಹಾಗೂ ಕೇಸರಿ ಬಾತ್ ಬಡಿಸಿದರು. ಅವರೊಂದಿಗೆ ತಾವೂ ಊಟ ಮಾಡಿ ಸಂಭ್ರಮಿಸಿದರು.
ಲಕ್ವ ರೋಗಕ್ಕೆ ತುತ್ತಾಗಿ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ವೃದ್ಧರೊಬ್ಬರಿಗೆ ಶೇವಿಂಗ್, ಕೇಶ ಮುಂಡನ ಮಾಡಿ ಸ್ನಾನ ಮಾಡಿಸಿದರು. ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ಆತ್ಮವಿಶ್ವಾಸ ತುಂಬಿದರು. ಆ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾದರು.
ವೃದ್ಧಾಶ್ರಮದ ವ್ಯವಸ್ಥಾಪಕ ಜೈಹಿಂದ್ ನಾಗಣ್ಣ, ಸಮಾಜ ಸೇವಕರಾದ ಅರಕಲಗೂಡು ಡಾ.ಶ್ರೀನಿವಾಸ್, ಹಿರಿಯ ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ನರ್ಸ್‌ಗಳು ಉಪಸ್ಥಿತರಿದ್ದು, ಆಶ್ರಮವಾಸಿಗಳ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net