ಯುವಪೀಳಿಗೆಗೆ ಮೊಬೈಲ್, ಮಾದಕ ವ್ಯಸನ ಅಪಾಯ

ಕಿಕ್ಕೇರಿ ಸಮೀಪದ ಮಂದಗೆರೆ ಹೇಮಾವತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಮಾದಕ ವಸ್ತುಗಳಿಂದ ದೂರವಿರುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಟ ಮಧು, ಶೇಖರ್, ಚೇತನ್, ಭುವನೇಶ್ವರಿ, ಪಲ್ಲವಿ ಇತರರಿದ್ದರು.
ಕಿಕ್ಕೇರಿ ಸಮೀಪದ ಮಂದಗೆರೆ ಹೇಮಾವತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ಮಾದಕ ವಸ್ತುಗಳಿಂದ ದೂರವಿರುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ನಟ ಮಧು, ಶೇಖರ್, ಚೇತನ್, ಭುವನೇಶ್ವರಿ, ಪಲ್ಲವಿ ಇತರರಿದ್ದರು.
Published on
ಕಿಕ್ಕೇರಿ: ಇಂದಿನ ಯುವ ಪೀಳಿಗೆಯನ್ನು ಬಿಡದೆ ಕಾಡುತ್ತಿರುವ ಮೊಬೈಲ್, ಮಾದಕ ವಸ್ತುಗಳ ವ್ಯಸನ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಚಲನಚಿತ್ರ ನಟ ಮಧು ಮಂದಗೆರೆ ತಿಳಿಸಿದರು.
ಸಮೀಪದ ಮಂದಗೆರೆ ಗ್ರಾಮದ ಹೇಮಾವತಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಮಾದಕ ವಸ್ತುಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಓದಿನಲ್ಲಿ ಹಿನ್ನಡೆಯಾಗುತ್ತಿದೆ. ಅದೇ ರೀತಿ ಮಾದಕ ವಸ್ತುಗಳು ಯುವಕರ ಭವಿಷ್ಯವನ್ನೇ ಹಾಳು ಮಾಡುತ್ತಿವೆ. ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಪಾಲಕರು ಮತ್ತು ಶಿಕ್ಷಕರು ಜತೆಯಾಗಿ ಮಕ್ಕಳ ಮೇಲೆ ನಿಗಾವಹಿಸಬೇಕಿದೆ. ಉತ್ತಮ ಶಿಕ್ಷಣ, ಸಂಸ್ಕಾರ ಮತ್ತು ಆರೋಗ್ಯವೇ ನಮ್ಮ ದೇಶದ ಭವಿಷ್ಯ ಎಂದರು.
ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗುರಿಯತ್ತ ಮುನ್ನುಗ್ಗಿ. ನಾನು ಓದಿದ ಶಾಲೆ ಇದು. ಕಷ್ಟಪಟ್ಟು ಓದಿ ರೈಲ್ವೆಯಲ್ಲಿ ನೌಕರಿ ಗಳಿಸಿದೆ. ಜತೆಗೆ ಚಲನಚಿತ್ರ ನಟನಾಗಿ ಹೆಸರುಗಳಿಸಿದೆ. ಎಲ್ಲದಕ್ಕೂ ಪರಿಶ್ರಮ, ಛಲ ಇದ್ದರೆ ಮಾತ್ರ ಸಾಧ್ಯ. ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಪರಿಕರ ನೀಡುವೆ. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪುರಸ್ಕಾರದೊಂದಿಗೆ ಉತ್ತಮ ಉಡುಗೊರೆ ನೀಡುವೆ. ಕನ್ನಡ ಮಾಧ್ಯಮದ ಅನುದಾನಿತ ಶಾಲೆ ಇದಾಗಿದ್ದು ಉಳಿಸುವ ಶಕ್ತಿ ಮಕ್ಕಳು, ಪಾಲಕರ ಮೇಲಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಶಾಲೆಗೆ ಗೈರಾಗದಿರಿ. ಓದಿನಲ್ಲಿ ಸಮಸ್ಯೆ ಇದ್ದರೆ ಪರಿಹರಿಸಲು ಶಿಕ್ಷಕರಾಗಿ ನಾವಿದ್ದೇವೆ. ಶಿಕ್ಷಣವೇ ತಮ್ಮ ಆಸ್ತಿ ಎಂಬುದನ್ನು ಮರೆಯಬಾರದು ಎಂದು ಕಿವಿ ಮಾತನಾಡಿದರು.
ಶಿಕ್ಷಕರಾದ ಚೇತನ್, ಭುವನೇಶ್ವರಿ, ಪಲ್ಲವಿ, ಎಸ್‌ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net