ನಾಲೆಗಳು ಹಾಗೂ ಪಿಕಪ್‌ನಾಲಾ ಆಧುನೀಕರಣಕ್ಕೆ ಶುಕ್ರವಾರ ಚಾಲನೆ

ಮಳವಳ್ಳಿ ತಾಲೂಕಿನ‌ ಕಂದೇಗಾಲ ಬಳಿ ಶುಕ್ರವಾರ ನಾಲಾ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು.ಸಿ.ಪಿ ರಾಜು, ಲಿಂಗರಾಜು, ನ ದಿಲೀಪ್ ಕುಮಾರ್, ಮರಿಸ್ವಾಮಿ, ಕುಳ್ಳಚನ್ನಂಕಯ್ಯ, ಚನ್ನಿಗರಾಯ, ಶ್ರೀನಿವಾಸ್, ರವಿ, ಶಿವಲಿಂಗ ಶ್ರೀನಿವಾಸ್, ದೇವರಾಜು ಇದ್ದರು.
ಮಳವಳ್ಳಿ ತಾಲೂಕಿನ‌ ಕಂದೇಗಾಲ ಬಳಿ ಶುಕ್ರವಾರ ನಾಲಾ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭೂಮಿಪೂಜೆ ನೆರವೇರಿಸಿದರು.ಸಿ.ಪಿ ರಾಜು, ಲಿಂಗರಾಜು, ನ ದಿಲೀಪ್ ಕುಮಾರ್, ಮರಿಸ್ವಾಮಿ, ಕುಳ್ಳಚನ್ನಂಕಯ್ಯ, ಚನ್ನಿಗರಾಯ, ಶ್ರೀನಿವಾಸ್, ರವಿ, ಶಿವಲಿಂಗ ಶ್ರೀನಿವಾಸ್, ದೇವರಾಜು ಇದ್ದರು.
Published on
ಮಳವಳ್ಳಿ : ರೈತರ ಭವಿಷ್ಯವನ್ನು ಉತ್ತಮಗೊಳಿಸಲು ತಾಲೂಕಿನ ವ್ಯಾಪ್ತಿಯಲ್ಲಿ ನಡೆತುತ್ತಿರುವ 6೦೦ ಕೋಟಿ ರೂ. ವೆಚ್ಚದ ನಾಲಾ ಆಧುನೀಕರಣ ವಿಚಾರದಲ್ಲಿ ರಾಜಕೀಯ ಮಾಡದೇ ಅಭಿವೃದ್ದಿಗೆ ಪ್ರತಿಯೊಬ್ಬರು ಸಹಕರಿಸುವಂತೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ಮನವಿ ಮಾಡಿದರು.
ತಾಲೂಕಿನ ಕಂದೇಗಾಲ, ತಳಗವಾದಿ ಗ್ರಾಮಗಳಲ್ಲಿ ವಿಸಿ ನಾಲಾ ಜಾಲದಡಿ ಬರುವ ಹೆಬ್ಬಕವಾಡಿ ಮತ್ತು ನಿಡಘಟ್ಟ ಮುಖ್ಯ ನಾಲೆಗಳು ಹಾಗೂ ಪಿಕಪ್‌ನಾಲಾ ಆಧುನೀಕರಣಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸುವ ಹಿನ್ನೆಲೆಯಲ್ಲಿ ರೈತರ ಮಕ್ಕಳ ನಿರುದ್ಯೋಗ ನಿವಾರಣೆಗಾಗಿ ಜವಾಬ್ದಾರಿಯಿಂದ ನಾಲಾ ಆಧುನೀಕರಣಕ್ಕೆ 6೦೦ ಕೋಟಿ ರೂ.ಅನುದಾನ ಬಿಡುಗಡೆ ಮಾಡಿಸುವ ಮೂಲಕ ಕಾಮಗಾರಿ ಪ್ರಾರಂಭಸಿಲಸಾಗಿದೆ ಎಂದರು.
ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಮತ್ತಿತಾಳೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಲು ಕೆಲವೇ ದಿನಗಳಲ್ಲಿ ಸರ್ಕಾರದಿಂದ ವಿಶೇಷ ಅನುದಾನಕ್ಕೆ ಅನುಮೋದನೆ ಪಡೆದುಕೊಳ್ಳಲಾಗುವುದು. ಜತೆಗೆ ತಾಲೂಕಿನ ಎಲ್ಲಾ ಪುಣ್ಯ ಕ್ಷೇತ್ರಗಳನ್ನು ಅಭಿವೃದ್ದಿಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ತಾಲೂಕಿನಲ್ಲಿ ವಿದ್ಯುತ್, ಕುಡಿಯುವ ನೀರು, ರಸ್ತೆ, ನಾಲಾ ಆಧುನೀಕರಣದ ಜತೆಗೆ ಅನ್ನದಾತರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಆಶಯದೊಂದಿಗೆ 40 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ಅಭಿವೃದ್ದಿಗೊಳಿಸುವ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆಂದರು.
ಸರ್ಕಾರದಿಂದ ಸಾವಿರಾರು ಕೋಟಿ ರೂ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿಪಡಿಸಲು ಶ್ರಮಿಸಲಾಗುತ್ತಿದೆ. ಆದರೆ ಕೆಲ ವಿರೋಧಿ ವರ್ಗ ನನ್ನ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ತಾಲೂಕಿಗೆ ಬೇಕಾದ ಯೋಜನೆಗಳನ್ನು ತರಲು ಸೌಮ್ಯಸ್ವಾಭಾವ ಸಲ್ಲದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನನ್ನ ರಾಜಕೀಯ ಜೀವನದಲ್ಲಿ ನೇರವಾಗಿ ಮಾತನಾಡುತ್ತೇನೆ, ನಾನು ಮಾಡಬೇಕೆಂದಿರುವ ಅಭಿವೃದ್ದಿ ಕಾರ್ಯಗಳನ್ನು ನೆರೆವೇರಿಸುವುದರ ಮೂಲಕ ಮತದಾರರ ಋಣವನ್ನು ಪ್ರಾಮಾಣಿಕವಾಗಿ ತೀರಿಸಿದ್ದೇನೆ ಹೊರತು ಬೇರೆಯವರ ರೀತಿಯಲಿ ಕಾಲಹರಣ ಮಾಡಲಿಲ್ಲ ಎಂದು ಸ್ವಷ್ಟಪಡಿಸಿದರು.
ನಾಲಾ ಆಧುನೀಕರಣಕ್ಕೆ ಖರ್ಚು ಮಾಡುತ್ತಿರುವ ಹಣವನ್ನು ರೈತರು ಒಂದೇ ಬೆಳೆಯಲ್ಲಿ ಸಂಪಾದನೆ ಮಾಡಲಿದ್ದಾರೆ. ಸಂಪೂರ್ಣವಾಗಿ ನಾಲೆಗಳು ಅಭಿವೃದ್ದಿಗೊಂಡರೇ ಕೆಆರ್‌ಎಸ್‌ನಿಂದ 24 ಗಂಟೆಯಲ್ಲಿ ನೀರು ನಿಮ್ಮ ಹೊಲಗದ್ದೆಗಳಿಗೆ ಸೇರಲಿದೆ. ಹೆಚ್ಚುವರಿ ಕೆಲಸವಿದ್ದರೂ ಕೂಡ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಈಗಾಗಲೇ ತಾಕೀತು ಮಾಡಲಾಗಿದ್ದು, ನಾಲಾ ಆಧುನೀಕರಣ ವಿಚಾರದಲ್ಲಿ ಗೊಂದಲ ಸೃಷ್ಠಿಸುವವರಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು. ಇದಕ್ಕೂ ಮುನ್ನಾ
ತಳಗವಾದಿ ಗ್ರಾಮದಲ್ಲಿ ಮಳವಳ್ಳಿ ಕೆರೆಗೆ ಹೆಬ್ಬಕವಾಡಿ ಶಾಲಾ ನಾಲೆಯಿಂದ ನೀರೊದಗಿಸುವ ನಾಲೆ ಹಾಗೂ ಪಿಕಪ್ ನಾಲೆ ಆಧುನೀಕರಣ, ತಳಗವಾದಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಯಿತು. ತಾಲ್ಲೂಕಿನ ಮಾಗನೂರು ಗ್ರಾಮದಲ್ಲಿ 15 ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾಗಿರುವ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶ ದಿಲೀಪ್ ಕುಮಾರ್, ಗ್ರಾ.ಪಂ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಕುಳ್ಳಚನ್ನಂಕಯ್ಯ, ಚನ್ನಿಗರಾಯ, ಶ್ರೀನಿವಾಸ್, ರವಿ, ಶಿವಲಿಂಗ ಶ್ರೀನಿವಾಸ್, ದೇವರಾಜು, ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net