ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ ಬದ್ಧ

ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಧನಲಕ್ಷ್ಮಿ ದಂಪತಿಗಳು ಮಂಗಳವಾರ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮತ್ತು ಧನಲಕ್ಷ್ಮಿ ದಂಪತಿಗಳು ಮಂಗಳವಾರ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
Published on

ಮೇಲುಕೋಟೆ:

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಧನಲಕ್ಷ್ಮೀ ದಂಪತಿ ಮಂಗಳವಾರ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ನಾಡಿನ ಸುಭಿಕ್ಷತೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ದರ್ಶನ ಮಾಡಿದ ಬಳಿಕ ಮಾತನಾಡಿದ ಸಚಿವರು, ತಿರುಪತಿಗೆ ಸಮಾನ ಮಹತ್ವವಿರುವ ಶ್ರೀ ಕ್ಷೇತ್ರ ಮೇಲುಕೋಟೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಜಿಲ್ಲಾಡಳಿತದಿಂದ ನೀಲಿನಕ್ಷೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದರು.
ಬೆಳಗ್ಗೆ 10 ಗಂಟೆಗೆ ದೇವಾಲಯಕ್ಕೆ ಆಗಮಿಸಿದ ಸಚಿವರನ್ನು ದೇವಾಲಯದ ಆಡಳಿತಾಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ದೇಗುಲದ ಇಒ ಶೀಲ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯಶ್ರೀನಿವಾಸ ನರಸಿಂಹನ್ ಗುರೂಜಿ ಸ್ವಾಗತಿಸಿದರು. ನಂತರ ಶಾತ್ತುಮೊರೈನಲ್ಲಿ ಪಾಲ್ಗೊಂಡು ಮಹಾರಾಜರಿಗೆ ಸಲ್ಲುವ ಗೌರವವನ್ನು ಸ್ವೀಕರಿಸಿದರು.
ಯದುಗಿರಿನಾಯಕಿ ಅಮ್ಮನವರು, ರಾಮಾನುಜರ ದರ್ಶನ ಪಡೆದ ನಂತರ ಪ್ರತಿ ಬಾರಿಯಂತೆ ಯತಿರಾಜದಾಸರ್ ಗುರುಪೀಠಕ್ಕೆ ತೆರಳಿ ವಿಜಯಲಕ್ಷ್ಮೀ ಅಮ್ಮನವರ ದರ್ಶನ ಪಡೆದು ಶ್ರೀನಿವಾಸ ನರಸಿಂಹನ್ ಗುರೂಜಿ ಆಶೀರ್ವಾದ ಪಡೆದರು.
ಈ ವೇಳೆ ಚಲುವರಾಯಸ್ವಾಮಿ ದಂಪತಿಯನ್ನು ವೇದ-ಮಂತ್ರಗಳೊಂದಿಗೆ ಆಶೀರ್ವದಿಸಿ ನಿಮ್ಮಿಂದ ನಾಡಿನ ಜನತೆಗೆ ಹೆಚ್ಚಿನ ಸೇವೆ ದೊರೆಯಲಿ. ರಾಮಾನುಜರ ತಪೋಭೂಮಿ ಮೇಲುಕೋಟೆ ಅಬಿವೃದ್ಧಿ ಮಾಡಲು ಭಗವಂತ ನಿಮಗೆ ಎಲ್ಲ ಶಕ್ತಿ ನೀಡಲಿ ಎಂದು ಆಶೀರ್ವದಿಸಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ, ಸದಸ್ಯರಾದ ವೆಂಕಟರಾಮೇಗೌಡ, ಬಚ್ಚಿಕೊಪ್ಪಲು ರಾಜು, ಶೋಭಾ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net