ಕಂಬದಳ್ಳಿ ಗ್ರಾಮದಲ್ಲಿ ಶ್ರಮಿಕರ ಶಾಲೆ ಸ್ಥಾಪನೆಗೆ ಅಗತ್ಯ ಜಾಗವನ್ನು ಗುರುತಿಸಲಾಗಿದೆ. ಇದಲ್ಲದೆ, ಆಶ್ರಯ ಯೋಜನೆಯಡಿ ಹನಗನಹಳ್ಳಿ, ಗಣಿಗ, ಕೆರಗೋಡು, ಮಾರಗೌಡನಹಳ್ಳಿ ಹಾಗೂ ತುಂಬಕೆರೆ ಗ್ರಾಮಗಳಲ್ಲಿ 10 ರಿಂದ 20 ಎಕರೆವರೆಗೆ ಲಭ್ಯವಿರುವ ಗೋಮಾಳ, ಖರಾಬು ಹಾಗೂ ಇತರೆ ಸರ್ಕಾರಿ ಭೂಮಿಯನ್ನು ವಸತಿ ಯೋಜನೆಗಳಿಗಾಗಿ ಕಾಯ್ದಿರಿಸಬೇಕು. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟ ಸೂಚನೆ ನೀಡಿದ ಶಾಸಕ, ಆಡಳಿತಾಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ. ಜನ ಸಾಮಾನ್ಯರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ಅನವಶ್ಯಕವಾಗಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡಬಾರದು. ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಸಂಕಲ್ಪ ನಮ್ಮದು. ಅಭಿವೃದ್ಧಿ, ಉತ್ತಮ ಆಡಳಿತ ಹಾಗೂ ಜನಸೇವೆ ಎಂಬ ಮೂರು ಗುರಿಗಳನ್ನು ಸಾಧಿಸಲು ಎಲ್ಲ ಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.