ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹರಳಕೆರೆ ಗ್ರಾಮದಲ್ಲಿ ಬಸ್ ತಂಗುದಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಚಾಲನೆ ನೀಡಿದು. ಮುಖಂಡರಾಧ ರವಿ, ಶಿವರಾಮು, ಗಿರೀಶ್, ಕೆ.ಟಿ.ಲಕ್ಷ್ಮಣ್, ಚಂದ್ರು, ದೇವರಾಜು ಇದ್ದರು.
ಮದ್ದೂರು : ತಾಲೂಕಿನ ಕೊಪ್ಪ ಹೋಬಳಿಯ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಚಾಲನೆ ನೀಡಿದರು. ಅವ್ವೆರಹಳ್ಳಿ ಗ್ರಾಮದಲ್ಲಿ ಹೆಬ್ಬಾಗಿಲು ನಿರ್ಮಾಣ, ಹರಳಕೆರೆ ಗ್ರಾಮದಲ್ಲಿ ಐ ಮಾಸ್ಟ್ ವಿದ್ಯುತ್ ದೀಪ ಅಳವಡಿಕೆ, ಹಳೇ ಹಳ್ಳಿ ಹಾಗೂ ಕೊಪ್ಪದಲ್ಲಿ ಗ್ರಾಮಗಳಲ್ಲಿ ಬಸ್ ತಂಗುದಾಣ ನಿರ್ಮಾಣದ ಸುಮಾರು 50 ಲಕ್ಷ ರೂ. ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ತವರು ಹೋಬಳಿ ಕೊಪ್ಪವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಾಲ್ಕು ಜಿಲ್ಲೆಗಳಿಗೆ ನನಗೆ ಬರುವ ಎರಡು ಕೋಟಿ ಅನುದಾನವನ್ನು ಹಂಚಬೇಕಾಗಿರುವುದರಿಂದ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಗ್ರಾಮದ ಮುಖಂಡರಾದ ಅರಳಕೆರೆ ರವಿ, ಕೊಪ್ಪ ಭಾಗದ ಜೆಡಿಎಸ್ ಮುಖಂಡ ಗಿರೀಶ್, ಕೆ ಟಿ ಲಕ್ಷ್ಮಣ್, ಚಂದ್ರು, ಅವ್ವೆರಹಳ್ಳಿ ದೇವರಾಜ್, ಕೃಷ್ಣೆಗೌಡ, ರೋಹಿತ್, ಸಂತೋಷ, ಲೋಕೆಶ್ ಕೊಪ್ಪ ಉಮೇಶ್ ಸೇರಿದಂತೆ ಹಲವರು ಹಾಜರಿದ್ದರು.