ಲಾಭ, ನಷ್ಟದ ಅರಿವು ಮೂಡಿಸಲಿದೆ ಮಕ್ಕಳ ಸಂತೆ

ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಪೂರ್ಣಿಮಾ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯನ್ನು ಯೋಧ ನಂದೀಶ್ ಉದ್ಘಾಟಿಸಿದರು. ಸಂದೀಪ್, ಶಿವಪ್ಪ, ಜಿ.ಜೆ.ಕೃಷ್ಣ, ಪಂಕಜಾ, ವೀಣಾ, ಭಾರತೀ, ಶಿವಲಿಂಗಯ್ಯ ಇದ್ದರು.
ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ಪೂರ್ಣಿಮಾ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆಯನ್ನು ಯೋಧ ನಂದೀಶ್ ಉದ್ಘಾಟಿಸಿದರು. ಸಂದೀಪ್, ಶಿವಪ್ಪ, ಜಿ.ಜೆ.ಕೃಷ್ಣ, ಪಂಕಜಾ, ವೀಣಾ, ಭಾರತೀ, ಶಿವಲಿಂಗಯ್ಯ ಇದ್ದರು.
Published on
ಮದ್ದೂರು: ತಾಲೂಕಿನ ನಗರಕೆರೆ ಗ್ರಾಮದ ಪೂರ್ಣಿಮಾ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಕ್ಕಳ ಸಂತೆಯಲ್ಲಿ ಮಕ್ಕಳು 54 ಸ್ಟಾಲ್‌ಗಳನ್ನು ತೆರೆದು ಉತ್ತಮ ವ್ಯವಹಾರವನ್ನು ನಡೆಸಿದರು. ಮಕ್ಕಳು ತಂದಿದ್ದ ತಿಂಡಿ, ತಿನಿಸುಗಳು, ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಿ ಬಹುತೇಕ ಮಕ್ಕಳು ಲಾಭಗಳಿಸಿದರು.
ಮಕ್ಕಳ ಸಂತೆಗೆ ಅಕ್ಕ ಪಕ್ಕದ ಶಾಲೆಯ ಮಕ್ಕಳು, ಊರಿನ ಗ್ರಾಮಸ್ಥರು ಹಾಗೂ ಪಾಲಕರು ಆಗಮಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮವನ್ನು ಯೋಧ ನಂದೀಶ್ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸಂತೆಯಿಂದ ಮಕ್ಕಳಿಗೆ ವ್ಯಾಪಾರದ ಲಾಭ, ನಷ್ಟದ ಬಗ್ಗೆ ತಿಳಿಯುತ್ತದೆ. ಇದರಿಂದ ಮಕ್ಕಳಿಗೆ ಉಪಯೋಗವಾಗುತ್ತದೆ. ಆದ್ದರಿಂದ ಮಕ್ಕಳ ಸಂತೆ ಉಪಯುಕ್ತವಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಸಂದೀಪ್, ಮುಖ್ಯ ಶಿಕ್ಷಕ ನಗರಕೆರೆ ಶಿವಪ್ಪ, ಶಿಕ್ಷಕರಾದ ಜಿ.ಜೆ.ಕೃಷ್ಣ, ಪಂಕಜಾ, ವೀಣಾ, ಭಾರತೀ, ಶಿವಲಿಂಗಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net