ನೊಂದವರ ಬಾಳಿಗೆ ಉಳ್ಳವರು ಬೆಳಕಾಗಲಿ

ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ  ಬಿಆರ್‌ಸಿ ಫೌಂಡೇಶನ್ ಅಧ್ಯಕ್ಷ ಬೆಟ್ಟಸ್ವಾಮಿ ಗಂಗಾಧರ್ ಎಂಬ ವಿದ್ಯಾರ್ಥಿಗೆ ಉಚಿತವಾಗಿ ಸೈಕಲ್ ವಿತರಿಸಿದರು. ರಾಮಕೃಷ್ಣ, ದೇವರಾಜು, ದೇವೇಂದ್ರ, ಈ.ರಾಜು ಇದ್ದರು.
ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ ಬಿಆರ್‌ಸಿ ಫೌಂಡೇಶನ್ ಅಧ್ಯಕ್ಷ ಬೆಟ್ಟಸ್ವಾಮಿ ಗಂಗಾಧರ್ ಎಂಬ ವಿದ್ಯಾರ್ಥಿಗೆ ಉಚಿತವಾಗಿ ಸೈಕಲ್ ವಿತರಿಸಿದರು. ರಾಮಕೃಷ್ಣ, ದೇವರಾಜು, ದೇವೇಂದ್ರ, ಈ.ರಾಜು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಆರ್‌ಸಿ ಫೌಂಡೇಷನ್ ಅಧ್ಯಕ್ಷ ಬೆಟ್ಟಸ್ವಾಮಿ ಅಭಿಮತ
ಮದ್ದೂರು: ಸಮಾಜದಲ್ಲಿ ನೊಂದವರ ಬಾಳಿಗೆ ಉಳ್ಳವರು ಬೆಳಕಾಗಬೇಕು ಎಂದು ಬಿಆರ್‌ಸಿ ಫೌಂಡೇಷನ್ ಅಧ್ಯಕ್ಷ ಬೆಟ್ಟಸ್ವಾಮಿ ತಿಳಿಸಿದರು.
ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ ಬಿಆರ್‌ಸಿ ಫೌಂಡೇಷನ್ ವತಿಯಿಂದ ಹೆಬ್ಬೆರಳು ಸರ್ಕಾರಿ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗಂಗಾಧರ್ ಎಂಬ ವಿದ್ಯಾರ್ಥಿಗೆ ಸೈಕಲ್ ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಸಾಕಷ್ಟು ಜನರು ಸಂಕಷ್ಟದಲ್ಲಿದ್ದಾರೆ ಅಂತಹವರನ್ನು ಸಂಘ, ಸಂಸ್ಥೆಗಳು, ದಾನಿಗಳು ಗುರುತಿಸಿ ಸಹಾಯ ಮಾಡುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದರು.
ಗಂಗಾಧರ್ ಎಂಬ ವಿದ್ಯಾರ್ಥಿ ಕಲಿಕಾ ಹಿತದೃಷ್ಟಿಯಿಂದ ಬೈಸಿಕಲ್ ಕೊಡಿಸಿದ್ದು, ಮುಂಬರುವ ದಿನಗಳಲ್ಲಿ ಪ್ರತಿ ವರ್ಷದಂತೆ ಹೂತಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಿಗೆ ಬಿಆರ್‌ಸಿ ಫೌಂಡೇಷನ್ ವತಿಯಿಂದ ನೋಟ್ ಪುಸ್ತಕವನ್ನು ಒದಗಿಸಲಾಗುವುದು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣ, ಶಾಲೆಯ ಮುಖ್ಯಶಿಕ್ಷಕ ದೇವರಾಜ್ ಅವರು ಬಿಆರ್‌ಸಿ ಫೌಂಡೇಷನ್ ಅಧ್ಯಕ್ಷ ಬೆಟ್ಟಸ್ವಾಮಿ ಅವರನ್ನು ಸನ್ಮಾನಿಸಿದರು. ಎಸ್‌ಡಿಎಂಸಿ ಸದಸ್ಯರಾದ ದೇವೇಂದ್ರ, ಈ.ರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net