ಮಳವಳ್ಳಿ ತಾಲೂಕಿನಲ್ಲಿ 6 ಕೆರೆಗಳು ಈ ಯೋಜನೆಗೆ ಆಯ್ಕೆಗೊಂಡಿದ್ದು, ಮಹಿಳಾ ಸಂಘಗಳ ಸದಸ್ಯರು ಮತ್ಸ್ಯ ಸಂಜೀವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಯಶಸ್ವಿಯಾಗುವಂತೆ ಹಾರೈಸಿದರು. ಶ್ರೀ ಶಿವಪ್ಪ ಸ್ವಾಮೀಜಿ, ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್, ಮಾಜಿ ಅಧ್ಯಕ್ಷ ರವಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ಪೂಜಾಶ್ರೀ, ಗ್ರಾಪಂ ಸದಸ್ಯರು, ಪಿಡಿಒ ಕೃಷ್ಣ, ತಾಲೂಕು ಸಂಜೀವಿನಿ ಅಭಿಯಾನ ಸಿಬ್ಬಂದಿ ಮಹದೇವಸ್ವಾಮಿ, ನಿಂಗರಾಜು, ಕೃಷ್ಣ ಇದ್ದರು.