ಮಾರಮ್ಮ ದೇವಾಲಯ ಉದ್ಘಾಟನೆ

 ಮಳವಳ್ಳಿ ತಾಲೂಕಿನ ಚಿಕ್ಕೇಗೌಡನದೊಡ್ಡಿ(ಗುಮ್ಮನಹುಂಡಿ) ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಗ್ರಾಮ ದೇವತೆ ಮಾರಮ್ಮ ದೇವಾಲಯ ಲೋಕಾರ್ಪಣೆಗೆ ಸಿದ್ಧಗೊಂಡಿರುವುದು.
ಮಳವಳ್ಳಿ ತಾಲೂಕಿನ ಚಿಕ್ಕೇಗೌಡನದೊಡ್ಡಿ(ಗುಮ್ಮನಹುಂಡಿ) ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಗ್ರಾಮ ದೇವತೆ ಮಾರಮ್ಮ ದೇವಾಲಯ ಲೋಕಾರ್ಪಣೆಗೆ ಸಿದ್ಧಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 21ರಿಂದ ವಿಗ್ರಹ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮಗಳು
ಮಳವಳ್ಳಿ: ತಾಲೂಕಿನ ಕಿರುಗಾವಲು ಹೋಬಳಿ ಚಿಕ್ಕೇಗೌಡನದೊಡ್ಡಿ(ಗುಮ್ಮನಹುಂಡಿ) ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಗ್ರಾಮ ದೇವತೆ ಮಾರಮ್ಮ ದೇವಾಲಯ ಉದ್ಘಾಟನೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜ. 21 ರಿಂದ 23ರ ವರೆಗೆ ಜರುಗಲಿವೆ.
ಗ್ರಾಮದ ದೇವಾಲಯದಲ್ಲಿ ಜ.21ರ ಸಂಜೆ ಗೋಧೂಳಿ ಲಗ್ನದಲ್ಲಿ ಸಮತ್ಸ ಧೇನು ಸಹಿತ ಗಣಪೂಜೆ, ಪ್ರವೇಶ ಬಲಿ, ದ್ವಾರ ಪಾಲಕರ ಪೂಜೆ ನೆರವೇರಿಸುವ ಮೂಲಕ ದೇವಾಲಯಕ್ಕೆ ದೇವಿಯ ವಿಗ್ರಹ ಸ್ವಾಗತಿಸಿ ಬರಮಾಡಿಕೊಳ್ಳುವುದರ ಜತಗೆ ವಿವಿಧ ಹೋಮ ಹವನ ಕಾರ್ಯಕ್ರಮ ನಡೆಯಲಿದೆ.
ಜ.22ರಂದು ಬೆಳಗಿನ ಜಾವ ಸರ್ವ ಕಲಶ ಸ್ಥಾಪನಾದಿ ಪೂಜೆಗಳು, ಪಂಚ ಬ್ರಹ್ಮ-ನವಗ್ರಹ ಮೃತ್ಯುಂಜಯ ದಿಕ್ ಪಾಲಕರ ಸಹಿತ ಆದಿಶಕ್ತಿ ಉಮಾ ಮಹೇಶ್ವರಿ, ಲಕ್ಷ್ಮೀ ನಾರಾಯಣ ಸಹಿತ ಕಳಸ ಪೂಜೆಗಳು ಜರುಗಲಿವೆ. ಇದೇ ದಿನ ಸಂಜೆ ಅಗ್ನಿ ಸ್ಥಾಪನ ಸಹಿತ ಮಹಾ ಗಣಪತಿ ಹಾಗೂ ವಿವಿಧ ಹೋಮ ಹವನಗಳು ನೆರವೇರಲಿವೆ. ನಂತರ ಮೆರವಣಿಗೆ ಮೂಲಕ ಆಗಮಿಸುವ 22 ದೇವರುಗಳ ಕಂಡಾಯಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸುವ ಕಾರ್ಯ ನಡೆಯಲಿದೆ.
ಜ.23ರಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ನೂತನ ಮಾರಮ್ಮನ ದೇವಾಲಯಕ್ಕೆ ಕಲಶಾರೋಹಣ ಮಾಡಲಾಗುವುದು. ನಂತರ ದೇವಾಲಯದ ಗರ್ಭಗುಡಿಯಲ್ಲಿ ದೇವಿಯ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಬ್ರಾಹ್ಮಣ ವಟುಗಳ ಮಂತ್ರ ಘೋಷಣೆ, ಸಾಮೂಹಿಕ ಪ್ರಾರ್ಥನೆ ಮತ್ತು ವಿವಿಧ ಅಭಿಷೇಕ, ಮಹಾ ಮಂಗಳಾರತಿ ನಡೆಯಲಿದೆ. ನಂತರ ಗ್ರಾಮದಲ್ಲಿ 22 ದೇವರುಗಳ ಉತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಮುಖಂಡರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net