ಕನ್ನಡ ಭಾಷೆ ಉಳಿಸಲು ಕಂಕಣಬದ್ಧರಾಗಿ

ಮದ್ದೂರು  ತಾಲೂಕಿನ ಚಿಕ್ಕಂಕನಹಳ್ಳಿಯ ಶ್ರೀ ನಂದಿ ಬಸವೇಶ್ವರಸ್ವಾಮಿ ದೇಗುಲದಲ್ಲಿ ಕೆಸ್ತೂರು ಆಟೋ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು. ಕಲ್ಲೇಶ್‌ಕುಮಾರ್, ಯೋಗೇಶ್, ಶಿವಕುಮಾರ್, ರವಿ, ಶಿವು ಇದ್ದರು.

Published on
ಮದ್ದೂರು: ಕನ್ನಡ ಭಾಷೆಯು ಅತ್ಯಂತ ಪ್ರಾಚೀನ ಭಾಷಾಯಾಗಿದ್ದು, ಕನ್ನಡ ಭಾಷೆ ಉಳಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕೆಂದು ಪ್ರಧಾನ ಅರ್ಚಕ ಕಲ್ಲೇಶ್‌ಕುಮಾರ್ ತಿಳಿಸಿದರು.
ತಾಲೂಕಿನ ಚಿಕ್ಕಂಕನಹಳ್ಳಿಯ ಶ್ರೀ ನಂದಿ ಬಸವೇಶ್ವರಸ್ವಾಮಿ ದೇಗುಲದಲ್ಲಿ ಕೆಸ್ತೂರು ಆಟೋ ಚಾಲಕರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಟೋ ಚಾಲಕರಿಗೆ ಕನ್ನಡ ಭಾಷೆಯ ಬಗ್ಗೆ ಅಪಾರವಾದ ಗೌರವವಿದ್ದು, ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಆಟೋ ಚಾಲಕರು ಆಟೋಗಳ ಮೇಲೆ ಕನ್ನಡ ಭಾಷಾಭಿಮಾನ ಮೂಡಿಸುವ ಬರಹಗಳನ್ನು ಹಾಕಿಕೊಂಡು ಕನ್ನಡದ ರಾಯಬಾರಿಗಳಾಗಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಸ್ತೂರಿನಿಂದ ಹಲವಾರು ಆಟೋಗಳು ಚಿಕ್ಕಂಕನಹಳ್ಳಿಯಿಂದವರೆಗೆ ಕನ್ನಡ ಬಾವುಟಗಳನ್ನು ಹಾಕಿಕೊಂಡು ಶ್ರೀ ನಂದಿ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ವಿಧಾನಗಳನ್ನು ಅರ್ಚಕ ಕಲ್ಲೇಶ್‌ಕುಮಾರ್ ನೆರವೇರಿಸಿದರು. ಆಟೋ ಚಾಲಕರಾದ ಯೋಗೇಶ್, ಸತೀಶ್, ಶಿವಕುಮಾರ್, ರವಿ, ಶಿವು ಪುಟ್ಟಸ್ವಾಮಿ, ಪ್ರಕಾಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net