ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತ್ರಿ ಸಿಗುತ್ತಿತ್ತು. ಆದರೆ ವಿಬಿ-ಜಿ ರಾಮ್ ಜಿ ಯೋಜನೆಯಡಿ 125 ದಿನಗಳ ಖಾತ್ರಿ ಉದ್ಯೋಗ ಸಿಗಲಿದೆ. ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಲಿದೆ. ನೀರಾವರಿಗೆ ಕೆಲಸಗಳಿಗೆ ಆದ್ಯತೆ, ಗ್ರಾಮೀಣ ರಸ್ತೆ, ಮಾರುಕಟ್ಟೆ, ಪರಿಸರ ರಕ್ಷಣೆ, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಆದ್ಯತೆ ಸಿಗಲಿದೆ. ಕಾರ್ಮಿಕರಿಗೆ ಸಂಬಳದಲ್ಲಿ ಶೇ. 25ರಷ್ಟು ಹೆಚ್ಚಳವಾಗಲಿದೆ. ಡಿಜಿಟಲ್ ಸಂಬಳ ಪಾವತಿ ಆಗುವುದರಿಂದ ಅಕ್ರಮ, ಸೋರಿಕೆ ಸಮಸ್ಯೆ ಇರುವುದಿಲ್ಲ. ಇದರಿಂದ ಗ್ರಾಮೀಣ ಜನರ ಆದಾಯ ನಿಶ್ಚಿತವಾಗಿ ಹೆಚ್ಚಲಿದೆ. ಗಾಂಧೀಜಿ ಅವರ ಆಶಯಕ್ಕೆ ಇದು ಪೂರಕವಾಗಿದೆ. ರೈತರಿಗೂ, ಕೃಷಿ ಕಾರ್ಮಿಕರು ಇಬ್ಬರಿಗೂ ಅನುಕೂಲಕರವಾಗಲಿದೆ ಎಂದರು.